ಭಾರತದ ವಿರುದ್ಧ ಪಾಕ್ – ಟರ್ಕಿ ಜಾಲ!

masthmagaa.com:

ಕಾಶ್ಮೀರದ ವಿಚಾರದಲ್ಲಿ ಎಲ್ಲಾ ಕಡೆಯಿಂದ ಅವಮಾನ ಅನುಭವಿಸಿರೋ ಪಾಕಿಸ್ತಾನ ಟರ್ಕಿ ಜೊತೆ ಸೇರಿಕೊಂಡು ಹೊಸ ಜಾಲ ಹೂಡಿದೆ. ಬ್ರಿಟನ್ ರಾಜಧಾನಿ ಲಂಡನ್​​ನಲ್ಲಿರೋ ಟರ್ಕಿ ಮೂಲದ ಕಾನೂನು ಸಂಸ್ಥೆ ಸ್ಟೋಕ್ ವೈಟ್ ಲಿಮಿಟೆಡ್​​​ ಕಾಶ್ಮೀರಕ್ಕೆ ಸಂಬಂಧಿಸಿದಂತೆ ದೂರು ನೀಡಿದೆ. ಕಾಶ್ಮೀರದಲ್ಲಿ ಭಾರತ ಸರ್ಕಾರದ ಕಡೆಯಿಂದ ಯುದ್ಧಪರಾಧ ಸಂಭವಿಸ್ತಿದೆ. ಅಲ್ಲಿನ ಜನರನ್ನು ಹಿಂಸಿಸಲಾಗ್ತಿದೆ. ಹೀಗಾಗಿ ಇದಕ್ಕೆ ಕಾರಣವಾದ ಗೃಹಸಚಿವ ಅಮಿತ್ ಶಾ ಮತ್ತು ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರನ್ನು ಈಗಿಂದೀಗಲೇ ಅರೆಸ್ಟ್​ ಮಾಡ್ಬೇಕು ಅಂತ ಒತ್ತಾಯಿಸಲಾಗಿದೆ. ಕಾಶ್ಮೀರದಲ್ಲಿ ನೆಲೆಸಿರೋ 2 ಸಾವಿರ ಜನರ ಸಹಿ ಕೂಡ ಸಂಗ್ರಹಿಸಿದ್ದೀವಿ ನೋಡಿ ಅಂತ ದಾಖಲೆಯನ್ನು ಪೊಲೀಸರಿಗೆ ಒಪ್ಪಿಸಿದೆ. ಯುನೈಟೆಡ್ ಕಿಂಗ್​ಡಮ್​​ನ ಪೊಲೀಸರು ಈ ದೂರನ್ನು ಯುದ್ಧಪರಾಧಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸೋ ಘಟಕಕ್ಕೆ ವರ್ಗಾವಣೆ ಮಾಡಿದೆ. ಆದ್ರೆ ಭಾರತದ ಅಧಿಕಾರಿಗಳ ಪ್ರಕಾರ ಇದು ಪಾಕಿಸ್ತಾನದ್ದೇ ಪಿತೂರಿ. ಟರ್ಕಿ ಅಧಿಕಾರಿಗಳು ಈ ಸಂಸ್ಥೆಯನ್ನು ನಿಯಂತ್ರಿಸ್ತಿದ್ದು, ಪಾಕಿಸ್ತಾನದ ಸೂಚನೆ ಮೇರೆಗೆ ಈ ಕೆಲ್ಸ ಮಾಡ್ತಿದ್ದಾರೆ. ಇಸ್ಲಾಮಿಕ್ ಕಾನೂನಿನಲ್ಲಿ ಇವುಗಳು ಪರಿಣತಿ ಹೊಂದಿವೆ ಅಂತ ಮಾಹಿತಿ ನೀಡಿದ್ದಾರೆ. ಅಂದಹಾಗೆ ಇನ್ನೂ ಯಾವುದೇ ಬ್ರಿಟಿಷ್ ಅಧಿಕಾರಿಗಳು ಈ ವಿಚಾರವಾಗಿ ಅಲ್ಲಿರೋ ಭಾರತೀಯ ಹೈಕಮಿಷನರ್ ಕಚೇರಿಯನ್ನು ಸಂಪರ್ಕಿಸಿಲ್ಲ. ಸ್ಟೋಕ್ ವೈಟ್ ಲಿಮಿಟೆಡ್ ದೂರು ಮೂರ್ಖತನದಿಂದ ಕೂಡಿದೆ ಅಂತ ಕೂಡ ಭಾರತ ಕಿಡಿಕಾರಿದೆ. ಇದೇ ಕಾನೂನು ಸಂಸ್ಥೆ ಕಳೆದ ವರ್ಷ ಯುಎಇ ಮತ್ತು ಸೌದಿ ಅರೇಬಿಯಾದ ವಿರುದ್ಧ ಯೆಮನ್​ನಲ್ಲಿ ಯುದ್ಧಪರಾಧದ ಆರೋಪ ಮಾಡಿತ್ತು. ಯಾಕಂದ್ರೆ ಇತ್ತೀಚಿನ ವರ್ಷಗಳಲ್ಲಿ ಸೌದಿ, ಯುಎಇ ಜೊತೆಗೆ ಟರ್ಕಿಯ ಸಂಬಂಧ ಹದಗೆಡ್ತಾ ಬಂದಿದೆ. ಇನ್ನು ತನ್ನನ್ನ ತಾನು ಆಧುನಿಕ ಖಲೀಫ ಅಂತ ಗುರುತಿಸಿಕೊಳ್ಳಲು ಪ್ರಯತ್ನಿಸ್ತಿರೋ ರೆಸೆಪ್ ತೈಯೆಪ್ ಎರ್ಡೋಆನ್​​​, ಪಾಕಿಸ್ತಾನಕ್ಕೆ ಕ್ಲೋಸ್ ಆಗ್ತಿದ್ದಾರೆ. ಹೀಗಾಗಿ ಯಾವಾಗಲೂ ಟರ್ಕಿ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ಪರವಾಗಿಯೇ ಮಾತಾಡ್ತಾ ಬಂದಿದೆ. ಅದ್ರ ಭಾಗವಾಗಿಯೇ ಈಗ ಸ್ಟೋಕ್ ವೈಟ್ ಕಾನೂನು ಸಂಸ್ಥೆ ಈ ರೀತಿ ಭಾರತದ ವಿರುದ್ಧ ಹೆಜ್ಜೆ ಇಟ್ಟಿದೆ ಅಂತ ಕೂಡ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply