ಯುಕ್ರೇನ್​ನಿಂದ ಹೊರಗೆ ಬರಲು ಚೀನಿಯರು ಪಟ್ಟ ಪಾಡು ಒಂದೆರಡಲ್ಲ!

masthmagaa.com:

ಯುದ್ಧಪೀಡಿತ ಯುಕ್ರೇನ್​ನಲ್ಲಿ ಸಿಲುಕಿಕೊಂಡಿದ್ದ ಎಲ್ಲಾ 5,200 ಚೀನಿಯರನ್ನ ಸ್ಥಳಾಂತರ ಮಾಡಲಾಗಿದೆ ಅಂತ ಇತ್ತೀಚೆಗಷ್ಟೇ ಚೀನಾ ಘೋಷಿಸಿತ್ತು. ಆದ್ರೆ ಸ್ಥಳಾಂತರಗೊಂಡವರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಟಾರ್ಚರ್​ ಅನುಭವಿಸಿದ್ರು ಅನ್ನೋ ವಿಚಾರವೀಗ ಬೆಳಕಿಗೆ ಬಂದಿದೆ. ರೊಮೇನಿಯಾ ಮತ್ತು ಪೊಲ್ಯಾಂಡ್​​ನಿಂದ ಸ್ಥಳಾಂತರ ಚಾರ್ಟರ್ ಫ್ಲೈಟ್​​ಗಳನ್ನ ಹತ್ತಲು ಪ್ರತಿ ವ್ಯಕ್ತಿಗೆ ಸುಮಾರು 18,000 ಯುವಾನ್​ ಚಾರ್ಜ್​ ಮಾಡಿತ್ತು ಚೀನಾ ಅಂತ ವರದಿಯಾಗಿದೆ. 18,000 ಯುವಾನ್​ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 2 ಲಕ್ಷ ರೂಪಾಯಿ ಆಗುತ್ತೆ. ಅಲ್ಲಿಂದ ಚೀನಾಗೆ ಬಂದ ನಾಗರಿಕರು, 14ರಿಂದ 24 ದಿನಗಳ ಕಾಲ ನಿಗದಿಪಡಿಸಿದ ಹೋಟೆಲ್​ಗಳಲ್ಲಿ ತಮ್ಮದೇ ಖರ್ಚಿನಲ್ಲಿ ಕ್ವಾರಂಟೈನ್​ಗೆ ಒಳಪಡಬೇಕಿತ್ತು. ಇಂಥಾ ಹೋಟೆಲ್​​ಗಳಲ್ಲಿ ಕೆಲವರಿಗೆ ಲಕ್ಷಗಟ್ಟಲೆ ಬಿಲ್​​ ಆಗಿತ್ತು. ಕೆಲವರಂತೂ ಇಷ್ಟೆಲ್ಲಾ ದುಡ್ಡು ಕೊಟ್ಟು ನಾವ್​ ಚೀನಾಗೆ ವಾಪಸ್​ ಹೋಗ್ಬೇಕಾ ಅಂತ ಮತ್ತೊಮ್ಮೆ ಯೋಚಿಸಿದ್ರು. ಇನ್ನೂ ಕೆಲವರು ಈ ದರಗಳನ್ನ ಕಮ್ಮಿ ಮಾಡುವಂತೆ, ಸಬ್ಸೀಡಿ ನೀಡುವಂತೆ ಅಥವಾ ತಮಗೆ ರೂಮ್​ ವ್ಯವಸ್ಥೆ ಮಾಡುವಂತೆ ಕೆಲವರು ಆನ್​ಲೈನ್​ನಲ್ಲಿ ಪೆಟಿಷನ್ ಕೂಡ​ ಸಹಿ ಮಾಡಿದ್ರು ಅಂತ ವರದಿಯಾಗಿದೆ. ನಾವು ವಿದ್ಯಾರ್ಥಿಗಳು, ನಮ್ಮಿಂದ ಇಷ್ಟೆಲ್ಲಾ ದುಡ್ಡು ವಸೂಲಿ ಮಾಡೋದು ಸರಿಯಲ್ಲ ಅಂತ ಕೆಲ ವಿದ್ಯಾರ್ಥಿಗಳು ಅಸಮಾಧಾನ ಕೂಡ ಹೊರಹಾಕಿದ್ರು. ಈ ಬಗ್ಗೆ ಚೀನಾ ವಿದೇಶಾಂಗ ಇಲಾಖೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

-masthmagaa.com

Contact Us for Advertisement

Leave a Reply