ರಕ್ಷಣಾ ಮುಖ್ಯಸ್ಥರ ನೇಮಕಕ್ಕೆ ಹೊಸ ಮಾರ್ಗಸೂಚಿ ಹೊರಡಿಸಿದ ರಕ್ಷಣಾ ಸಚಿವಾಲಯ!

masthmagaa.com:

ಭಾರತೀಯ ರಕ್ಷಣಾ ವ್ಯವಸ್ಥೆಯ ಅತ್ಯುನ್ನತ ಹುದ್ದೆ ಚೀಫ್ ಆಫ್ ಡಿಪೆನ್ಸ್‌ ಸ್ಟಾಫ್‌‌ (CDS) ಅಥವಾ ರಕ್ಷಣಾ ಮುಖ್ಯಸ್ಥರ ನೇಮಕಕ್ಕೆ ಸಂಬಂಧಪಟ್ಟಂತೆ ರಕ್ಷಣಾ ಇಲಾಖೆ ಹೊಸ ಮಾನದಂಡಗಳನ್ನ ಪ್ರಕಟ ಮಾಡಿದೆ. ಸೇವೆಯಲ್ಲಿರೋ ಲೆಫ್ಟಿನೆಂಟ್‌ ಜನರಲ್, ನೌಕಾಪಡೆ ಅಥವಾ ವಾಯುಪಡೆಯ 62 ವರ್ಷದ ಒಳಗಿರೋ ಮುಖ್ಯಸ್ಥರೂ ಕೂಡ ಹುದ್ದೆಗೆ ನೇಮಕ ಆಗಬಹುದು ಅಂತ ಹೇಳಿದೆ. ಈ ಮೂಲಕ CDS ಆಗಿ ನೇಮಕ ಆಗಲಿರೋ ಅಧಿಕಾರಿಗಳ ವ್ಯಾಪ್ತಿಯನ್ನ ವಿಸ್ತರಿಸಿದೆ. ಅಂದ್ಹಾಗೆ ಈ ಮುಂಚೆ CDS ಆಗಿದ್ದ ಬಿಪಿನ್‌ ರಾವತ್‌ ಅವರು ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ ಬಳಿಕ ಈ ಹುದ್ದೆ ತೆರವಾಗಿತ್ತು. ಹಾಗಾಗಿ ಸರ್ಕಾರ ಹೊಸ ಅಧಿಕಾರಿಯ ಹುಡುಕಾಟದಲ್ಲಿದೆ. ಇದರ ನಡುವೆಯೇ ಈಗ ಈ ರೀತಿ ಬದಲಾವಣೆ ತರಲಾಗಿದೆ.

-masthmagaa.com

Contact Us for Advertisement

Leave a Reply