ದಸರಾದಂದು ಉತ್ತರ ಪ್ರದೇಶ ಸರ್ಕಾರದಿಂದ ಮಹಿಳೆಯರಿಗೆ ದೀಪಾವಳಿ ಗಿಫ್ಟ್..!

ಉತ್ತರ ಪ್ರದೇಶ ಸರ್ಕಾರ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಬಿಗ್ ಗಿಫ್ಟ್ ಕೊಟ್ಟಿದೆ. 4.09 ನಿರಾಶ್ರಿತ ಮಹಿಳೆಯರ ಖಾತೆಗಳಿಗೆ ದೀಪಾವಳಿಗೂ ಮುನ್ನವೇ ಪೆನ್ಶನ್ ಹಣ ನೀಡುವುದಾಗಿ ಘೋಷಿಸಲಾಗಿದೆ. ಇವರಲ್ಲಿ ಕಳೆದ ವರ್ಷ ಪೆನ್ಶನ್‍ನಿಂದ ವಂಚಿತರಾಗಿದ್ದ 87 ಸಾವಿರ ಮಹಿಳೆಯರೂ ಸೇರಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಹಬ್ಬದ ಒಳಗೆ ಹಣ ಪಾವತಿಸುವಂತೆ ಮಹಿಳಾ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ.

ಉತ್ತರಪ್ರದೇಶದಲ್ಲಿ 23.49 ಲಕ್ಷ ನಿರಾಶ್ರಿತ ಮಹಿಳೆಯರಿಗೆ ಪ್ರತಿ ತಿಂಗಳು 500 ರೂಪಾಯಿ ಪೆನ್ಶನ್ ನೀಡಲಾಗುತ್ತೆ. ಅದೇ ರೀತಿ ಈ ಬಾರಿ ಆರ್ಥಿಕ ವರ್ಷದ ನಿವೃತ್ತಿ ವೇತನವನ್ನು 2 ಕಂತುಗಳಲ್ಲಿ ನೀಡಲಾಗಿತ್ತು. ಆದ್ರೆ ಬ್ಯಾಂಕುಗಳ ಐಎಫ್‍ಎಸ್‍ಸಿ ಕೋಡ್ ಬದಲಾಗಿದ್ದರಿಂದ 3.21 ಲಕ್ಷ ಮಹಿಳೆಯರ ಖಾತೆಗೆ ಹಣ ಹೋಗಿರಲಿಲ್ಲ. ಹೀಗಾಗಿ ಆ 3.21 ಲಕ್ಷ ಮಹಿಳೆಯರು ಮತ್ತು ಕಳೆದ ವರ್ಷದ ನಿವೃತ್ತಿ ವೇತನದಿಂದ ವಂಚಿತರಾಗಿದ್ದ 86 ಸಾವಿರ ಮಹಿಳೆಯರಿಗೆ ನಿವೃತ್ತಿ ವೇತನದ ಮೊತ್ತವನ್ನು ಖಾತೆಗೆ ಹಾಕಲು ನಿರ್ಧರಿಸಲಾಗಿದೆ. ದೀಪಾವಳಿವರೆಗೂ ಟೈಂ ಇದ್ದರೂ ಕೂಡ ಇದೇ ಶುಕ್ರವಾರದ ಒಳಗೆ ಖಾತೆಗೆ ಹಣ ಬರಲಿದೆ.

Contact Us for Advertisement

Leave a Reply