ಗಾಂಧೀಜಿ ಪುಣ್ಯಸ್ಮರಣೆ, ಕಾಂಗ್ರೆಸ್ ಹಿಂದುತ್ವ ಬಾಣ!

masthmagaa.com:

ಇವತ್ತು ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ.. 1948ರಲ್ಲಿ ಇದೇ ನಾಥುರಾಮ್ ಗೋಡ್ಸೆ ಅಹಿಂಸಾವಾದಿ ಗಾಂಧೀಜಿಯವರ ಎದೆಗೆ ಮೂರ್ಮೂರು ಗುಂಡಿಕ್ಕಿ ಹತ್ಯೆ ಮಾಡಿದ್ದ.. ಈ ಕರಾಳ ದಿನವನ್ನು ಭಾರತದಲ್ಲಿ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತೆ. ಕೇಂದ್ರ ಸರ್ಕಾರದ ಸೂಚನೆ ಮೇರೆ ಇಡೀ ದೇಶದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2 ನಿಮಿಷಗಳ ಮೌನಾಚರಣೆ ಆಚರಿಸಲಾಯ್ತು.. ಪುಣ್ಯತಿಥಿಯ ಅಂಗವಾಗಿ ರಾಜ್​ಘಾಟ್​​ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಮಹಾತ್ಮ ಗಾಂಧಿಗೆ ಪುಷ್ಪನಮನ ಸಲ್ಲಿಸಿದ್ರು. ಇದಕ್ಕೂ ಟ್ವೀಟ್ ಮಾಡಿದ್ದ ಅವರು, ಗಾಂಧೀಜಿಯವರ ಉದಾತ್ತ ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸೋದು ನಮ್ಮ ಸಾಮೂಹಿಕ ಪ್ರಯತ್ನವಾಗಿದೆ. ಹುತಾತ್ಮರ ದಿನವಾದ ಇಂದು ನಮ್ಮ ದೇಶವನ್ನು ಧೈರ್ಯದಿಂದ ರಕ್ಷಿಸಿದ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ನಮಿಸುತ್ತೇನೆ ಅಂತ ಹೇಳಿದ್ದಾರೆ. ಗೃಹಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಮಹಾತ್ಮ ಗಾಂಧೀಜಿ ಭಾರತೀಯರ ಹೃದಯದಲ್ಲಿ ಸ್ವದೇಶಿ, ಸ್ವಭಾಷೆ ಮತ್ತು ಸ್ವರಾಜ್ ಅನ್ನೋ ಸ್ಫೂರ್ತಿ ತುಂಬಿದ್ರು ಅಂತ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್​​ಘಾಟ್​​ಗೆ ತೆರಳಿ ಶ್ರದ್ಧಾಂಜಲಿ ಅರ್ಪಿಸಿ, ಮಹಾತ್ಮ ಗಾಂಧೀಜಿಯವರ ಒಂದು ಸಂದೇಶವನ್ನು ಟ್ವೀಟ್ ಮಾಡಿದ್ಧಾರೆ. ಜೊತೆಗೆ ಓರ್ವ ಹಿಂದುತ್ವವಾದಿ ಗಾಂಧೀಜಿಗೆ ಗುಂಡು ಹಾರಿಸಿದ್ದ. ಎಲ್ಲಾ ಹಿಂದುತ್ವವಾದಿಗಳಿಗೆ ಗಾಂಧೀಜಿ ಇಲ್ಲ ಅಂತ ಅನ್ನಿಸುತ್ತೆ. ಆದ್ರೆ ಎಲ್ಲಿ ಸತ್ಯ ಇದೆಯೋ ಅಲ್ಲಿ ಬಾಪು ಜೀವಂತವಾಗಿದ್ದಾರೆ ಅಂತ ಆರ್​​ಎಸ್​ಎಸ್​ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ ಇದ್ರ ಬೆನ್ನಲ್ಲೆ ಕಾಂಗ್ರೆಸ್​​ನ ಹಲವು ನಾಯಕರು ಇದೇ ರೀತಿ ಹೇಳಿಕೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಹಿಂದೂ ಮತಾಂಧರು ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ್ರು. ಹಿಂದೂ ಅಲ್ಲದೇ ಬೇರೆ ಧರ್ಮೀಯರು ಅಂದ್ರೆ ಸಿಖ್ಖರು, ಮುಸ್ಲಿಮರು ಈ ಕೃತ್ಯ ಎಸಗಿದ್ರೆ ದೇಶದಲ್ಲಿ ಏನಾಗ್ತಿತ್ತು ಅಂತ ಹೇಳಕ್ಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply