ಹೊಸ ಪಾರ್ಟಿ ಘೋಷಿಸಿದ ಗುಲಾಮ್‌ ನಬಿ ಅಜಾದ್‌! ಹೆಸರೇನು ಗೊತ್ತಾ?

masthmagaa.com:

ಕಾಂಗ್ರೆಸ್‌ನಿಂದ ಹೊರಬಂದ ಕರೆಕ್ಟ್‌ ಒಂದು ತಿಂಗಳ ನಂತ್ರ ಜಮ್ಮುಕಾಶ್ಮೀರದ ಮಾಜಿ ಸಿಎಂ, ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಅಜಾದ್‌ ತಮ್ಮ ಹೊಸ ಪಕ್ಷದ ಹೆಸರನ್ನ ಅನಾವರಣಗೊಳಿಸಿದ್ದಾರೆ. ʻಡೆಮಾಕ್ರೆಟಿಕ್‌ ಅಜಾದ್‌ ಪಾರ್ಟಿʼ ಅನ್ನೋ ಹೆಸರು ಇಡಲಾಗಿದೆ. ಇದು ಯಾರ ಪ್ರಭಾವಕ್ಕೂ ಒಳಪಡೋದಿಲ್ಲ. ಇದು ಜಾತ್ಯಾತೀತ ಮತ್ತು ಪ್ರಜಾಸತ್ತಾತ್ಮಕವಾಗಿರುತ್ತೆ ಅಂತ ಹೇಳಿದ್ದಾರೆ. ಪಕ್ಷದ ಬಾವುಟದಲ್ಲಿ ಮಸ್ಟರ್ಡ್‌ ಅಥವಾ ಸಾಸಿವೆ ಬಣ್ಣ, ಬಿಳಿ ಮತ್ತು ನೀಲಿ ಬಣ್ಣಗಳಿವೆ. ಸಾಸಿವೆ ಬಣ್ಣ ಕ್ರಿಯಾಶೀಲತೆ ಮತ್ತು ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತದೆ, ಬಿಳಿ ಶಾಂತಿಯನ್ನು ಮತ್ತು ನೀಲಿ ಸ್ವತಂತ್ರದ ಧ್ಯೋತಕವಾಗಿದೆ. ಇದು ಇಲ್ಲಿನ ಅಂದ್ರೆ ಜಮ್ಮುಕಾಶ್ಮೀರದ ಹಕ್ಕುಗಳಿಗೆ, ಇದಕ್ಕೆ ರಾಜ್ಯದ ಸ್ಥಾನಮಾನವನ್ನ ಪುನಃ ಪಡೆದುಕೊಳ್ಳೋ ಕಡೆ ಫೋಕಸ್‌ ಮಾಡುತ್ತೆ ಅಂತ 73 ವರ್ಷದ ಅಜಾದ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply