ಗೂಗಲ್​ ಕಂಪನಿಯಲ್ಲಿ ತಾರತಮ್ಯ: ಉದ್ಯೋಗಿಗಳಿಂದ ಸರಣಿ ರಾಜೀನಾಮೆ

masthmagaa.com:

ಟೆಕ್​ ಕ್ಷೇತ್ರದ ದೈತ್ಯ ಕಂಪನಿ ಗೂಗಲ್​​ನಲ್ಲಿ ಜನಾಂಗೀಯ ನಿಂದನೆ, ತಾರಮ್ಯ ವಿರುದ್ಧ ನಡೀತಿದ್ದ ಹೋರಾಟ ಮುಂದುವರಿದಿದೆ. ಇದರ ಮುಂದುವರಿದ ಭಾಗವಾಗಿ ಗೂಗಲ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂಡದ ಮ್ಯಾನೇಜರ್ ಸ್ಯಾಮಿ ಬೆಂಜಿಯೋ ರಾಜೀನಾಮೆ ನೀಡಿದ್ದಾರೆ. ಅಂದ್ಹಾಗೆ ಗೂಗಲ್​ನ ಆರ್ಟಿಫಿಷಿಯಲ್ ಇಂಟಲಿಜೆನ್ಸ್​ ಸಂಶೋಧಕರಾಗಿದ್ದ ಟಿನ್​ಮಿಟ್​ ಗೆಬ್ರು ಅವರನ್ನ ಕಳೆದ ವರ್ಷದ ಡಿಸೆಂಬರ್​ನಲ್ಲಿ ಕಂಪನಿಯಿಂದ ಫೈರ್ ಮಾಡಲಾಗಿತ್ತು. ರಿಸರ್ಚ್ ಪೇಪರ್ ಒಂದಕ್ಕೆ ಸಂಬಂಧಿಸಿದಂತೆ ಗೂಗಲ್ ಮತ್ತು ಗೆಬ್ರು ನಡುವೆ ಸಂಘರ್ಷ ನಡೀತಿತ್ತು, ಹೀಗಾಗಿ ಅವರನ್ನ ಫೈರ್ ಮಾಡಿತ್ತು ಕಂಪನಿ. ಬಳಿಕ ಈ ವರ್ಷದ ಫೆಬ್ರವರಿಯಲ್ಲಿ ಮಾರ್ಗರೆಟ್ ಮಿಶೆಲ್ ಅವರನ್ನ ಕೂಡ ಫೈರ್ ಮಾಡ್ತು ಗೂಗಲ್.

ಕಂಪನಿಯ ಫೈಲ್​ಗಳನ್ನ ಬೇರೆಯವರಿಗೆ ಲೀಕ್​ ಮಾಡಿದ್ದಕ್ಕೆ ಅವರನ್ನ ಕಿತ್ತಾಕಿದ್ದೀವಿ ಅಂತ ಗೂಗಲ್ ಹೇಳ್ತು. ಆದ್ರೆ ಕಂಪನಿಯಲ್ಲಿ ನಡೀತಿದ್ದ ಜನಾಂಗೀಯ ತಾರತಮ್ಯ, ಲಿಂಗ ತಾರತಮ್ಯದ ಬಗ್ಗೆ ದನಿ ಎತ್ತಿದ್ದಕ್ಕೆ ಕೆಲಸದಿಂದ ತೆಗೆದು ಹಾಕಿದ್ದಾರೆ ಅಂತ ಮಾರ್ಗರೆಟ್​ ಮಿಶೆಲ್ ಗಂಭೀರ ಆರೋಪ ಮಾಡಿದ್ರು. ಗೆಬ್ರು ಕೂಡ ತಾವು ಕಪ್ಪು ವರ್ಣಿಯ ಆಗಿದ್ದರಿಂದ ತಮ್ಮನ್ನ ಕಂಪನಿಯು ಬೇರೆ ಥರ ನೋಡ್ತು ಅಂತ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇವರಿಬ್ಬರನ್ನ ಫೈರ್​ ಮಾಡಿದ ಬೆನ್ನಲ್ಲೇ ಸ್ಯಾಮಿ ಬೆಂಜಿಯೋ ಕೂಡ ರಾಜೀನಾಮೆ ನೀಡಿದ್ದಾರೆ. ಇವರೆಲ್ಲಾ ಗೂಗಲ್​ ಬ್ರೈನ್ ಅನ್ನೋ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪ್ರಾಜೆಕ್ಟ್ ಮೇಲೆ ಕೆಲಸ ಮಾಡ್ತಿದ್ರು. ಆದ್ರೀಗ ಒಬ್ಬರಾದ ಮೇಲೊಬ್ಬರಂತೆ ರಿಸೈನ್ ಮಾಡ್ತಿರೋದು ಆಲ್ಫಬೆಟ್​ ಇನ್​ಕಾರ್ಪೊರೇಟೆಡ್​ನ ಯೂನಿಟ್​ ಆಗಿರೋ ಗೂಗಲ್​ಗೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ.

-masthmagaa.com

Contact Us for Advertisement

Leave a Reply