“ಕಷ್ಟದ ದಿನಗಳಲ್ಲಿ ಡಿಪ್ರೆಷನ್‌ಗೆ ಹೋಗಿದ್ದೆ”: ರೆಮೋ ಡಿ’ಸೋಜಾ

masthmagaa.com:

ಬಾಲಿವುಡ್‌ ಡ್ಯಾನ್ಸ್‌ ಕೋರಿಯೋಗ್ರಾಫರ್‌ ಮತ್ತು ಡೈರೆಕ್ಟರ್‌ ಆಗಿರುವ ರೆಮೋ ಡಿ’ಸೋಜಾ ತಮ್ಮ ಕಷ್ಟದ ದಿನಗಳು ಮತ್ತು ಸಿನಿಮಾ ಪ್ಲಾಫ್‌ ಆದಾಗ ಡಿಪ್ರೆಷನ್‌ ಬಗ್ಗೆ ಮಾತನಾಡಿದ್ದಾರೆ. ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ 3’ ರ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಸೆಲೆಬ್ರಿಟಿಯಾಗಿ ಕಾಣಿಸಿಕೊಂಡ ರೆಮೋ ಡಿ’ಸೋಜಾ ಶೋನ ಮಧ್ಯದಲ್ಲಿ ತಮ್ಮ ಕಷ್ಟದ ದಿನಗಳನ್ನ ನೆನಪಿಸಕೊಂಡರು.

” ನಾನು ಕೂಡ ತುಂಬಾ ಕಷ್ಟಪಟ್ಟಿದ್ದೇನೆ. ನಾನು ಸಿನಿಮಾ ಮಾಡ್ದೆ, ಆದರೆ ಕೆಲವು ಸಿನಿಮಾಗಳು ನನ್ನ ಕೈ ಹಿಡಿಯಲಿಲ್ಲ. ಒಂದ್‌ ಸಿನಿಮಾ ಮಾಡಿದೆ ಹಿಟ್‌ ಆಗ್ಲಿಲ್ಲ, ಆದ್ರು ಸಹ ಎರಡನೇ ಸಿನಿಮಾಗೆ ಕೈ ಹಾಕಿ ಅಲ್ಲಿಯೂ ಕೈ ಸುಟ್ಟುಕೊಂಡೆ. ಇದೆಲ್ಲಾ ಭಾರವನ್ನ ಸಹಿಸಲು ಸಾಧ್ಯವಾಗದೇ ಡಿಪ್ರೆಷನ್‌ಗೆ ಹೋದೆ. ಮತ್ತೆ ನನಗೆ ನಾನೇ ಸವಾಲ್‌ ಹಾಕೊಂಡೆ.”ಅಂತ ಹೇಳಿ ಅಲ್ಲಿದ್ದ ಕಂಟೆಸ್ಟಂಟ್‌ಗಳಿಗೆ ಹುರಿದುಂಬಿಸಿದರು.

-masthmagaa.com

Contact Us for Advertisement

Leave a Reply