ಹೆರಿಗೆ ವೇಳೆ ಮಕ್ಕಳ ಮರಣ: ಲಸಿಕೆ ಕಂಡು ಹಿಡೀರಿ ಎಂದ WHO

masthmagaa.com:

ಹೆರಿಗೆ ವೇಳೆ ಮಗು ಸಾವು ಮತ್ತು ಶಿಶುಗಳ ಮರಣಕ್ಕೆ ಕಾರಣವಾಗಿರೋ ಗ್ರೂಪ್​ಬಿ ಸ್ಟ್ರೆಪ್ಟೋಕಾಕಸ್​ ಇನ್ಫೆಕ್ಷನ್​​ಗೆ ಲಸಿಕೆ ಕಂಡು ಹಿಡಿಯಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸಿದೆ. ಇದ್ರಿಂದ ಪ್ರತಿ ವರ್ಷ ಸುಮಾರು ಒಂದೂವರೆ ಲಕ್ಷ ಶಿಶುಗಳು ಪ್ರಾಣ ಬಿಡ್ತಿವೆ ಅಂತ ಕೂಡ ಸಂಸ್ಥೆ ಎಚ್ಚರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಲಂಡನ್ ಸ್ಕೂಲ್ ಆಫ್ ಹೈಜೀನ್ ಮತ್ತು ಟ್ರಾಪಿಕಲ್ ಮೆಡಿಸಿನ್​ ಜಂಟಿಯಾಗಿ ಒಂದು ವರದಿ ಬಿಡುಗಡೆ ಮಾಡಿದೆ. ಅದ್ರಲ್ಲಿ 2017ರಿಂದ ಈವರೆಗೆ ಪ್ರತಿ ವರ್ಷ ಈ ಇನ್​ಫೆಕ್ಷನ್​ನಿಂದಾಗಿ 1 ಲಕ್ಷ ಶಿಶುಗಳು ಪ್ರಾಣ ಬಿಟ್ರೆ, 50 ಲಕ್ಷ ಹುಟ್ಟುವ ಮುನ್ನವೇ ಸಾಯುತ್ತಿವೆ ಅಂತ ಹೇಳಲಾಗಿದೆ. ಅಂದಹಾಗೆ ಇದೊಂದು ಬ್ಯಾಕ್ಟೀರಿಯಾದಿಂದಾಗೋ ಇನ್​ಫೆಕ್ಷನ್​​. ಇದು ಯಾವುದೇ ಹಾನಿ ಮಾಡದೇ ಕರಳುನಾಳಲ್ಲಿ ಇರುತ್ತವೆ. ಈ ಹೊಸ ವರದಿಯ ಪ್ರಕಾರ ವಿಶ್ವದ ಒಟ್ಟಾರೆ ಗರ್ಭಿಣಿಯರ ಪೈಕಿ 15 ಪರ್ಸೆಂಟ್​ನಷ್ಟು ಮಂದಿಯ ಯೋನಿಯಲ್ಲಿ ಈ ಬ್ಯಾಕ್ಟೀರಿಯಾ ಇರುತ್ತೆ. ಹೀಗಾಗಿ ಇದಕ್ಕೆ ಲಸಿಕೆ ಕಂಡು ಹಿಡಿದ್ರೆ ಪ್ರತಿ ವರ್ಷ ಲಕ್ಷಾಂತರ ಮಕ್ಕಳ ಜೀವ ಉಳಿಸಬಹುದು ಅಂತ ವರದಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply