ನೆತಾನ್ಯಹು ಇಳಿದಿದ್ದಕ್ಕೆ ಪ್ಯಾಲೆಸ್ತೇನ್ ಪ್ರಧಾನಿ ಹೇಳಿದ್ದೇನು..?

masthmagaa.com:

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕಾರದಿಂದ ಕೆಳಗಿಳಿದಿರೋದಕ್ಕೆ ಪ್ಯಾಲೆಸ್ತೇನಿಯನ್ ಪ್ರಧಾನಿ ಮೊಹಮ್ಮದ್ ಸ್ಟಾಯ್ಯೇಹ್ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ಕೆಟ್ಟ ಯುಗದ ಅಂತ್ಯ ಆಗಿದೆ ಅಂತ ಹೇಳಿದ್ದಾರೆ. ಹಾಗಂತ ಹೊಸ ಸರ್ಕಾರ ತಮ್ಮ ಪಾಲಿಗೆ ಸ್ಮೂತ್ ಆಗಿರುತ್ತೆ ಅಂತ ಏನೂ ಪ್ಯಾಲೆಸ್ಟೀನ್ಗೆ ನಿರೀಕ್ಷೆ ಇಲ್ಲ. ಈ ಬಗ್ಗೆ ಮಾತಾಡಿರೋ ಪ್ಯಾಲೆಸ್ಟೀನ್ ಪ್ರಧಾನಿ, ‘ಹೊಸ ಸರ್ಕಾರ ಮೊದಲಿಗಿಂತ ಕಮ್ಮಿ ಕೆಟ್ಟದ್ದಾಗಿರುತ್ತೆ ಅಂತ ನಾವ್ ನಿರೀಕ್ಷೆ ಇಟ್ಟುಕೊಳ್ತೀವಿ. ಹೊಸ ಸರ್ಕಾರವೂ ಪ್ಯಾಲೆಸ್ತೀನ್ ಜನರ ಹಕ್ಕುಗಳನ್ನ ಅರ್ಥ ಮಾಡಿಕೊಳ್ಳದಿದ್ದರೆ ಇಸ್ರೆಲ್ಗೆ ಭವಿಷ್ಯ ಇಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply