ಸದ್ಯದಲ್ಲೇ ವಾಪಸ್ ಬರ್ತೀನಿ..! ನೆನಪಿಸಿಕೊಳ್ಳುತ್ತಿರಿ ಅಂದಿದ್ದೇಕೆ ಪಾಂಡ್ಯ..!

ಟೀಂ ಇಂಡಿಯಾದ ಆಲ್‍ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿರುವ ಪಾಂಡ್ಯ, ನಿಮ್ಮೆಲ್ಲರ ಶುಭ ಹಾರೈಕೆಗೆ ಧನ್ಯವಾದ. ನಾನು ಸದ್ಯದಲ್ಲೇ ವಾಪಸ್ ಬರುತ್ತೇನೆ. ಅಲ್ಲಿಯವರೆಗೆ ನನ್ನನ್ನು ನೆನಪಿಸಿಕೊಳ್ಳುತ್ತಿರಿ ಎಂದು ಬರೆದುಕೊಂಡಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಮೂರೂ ಟಿ-20 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಆಟವಾಡಿದ್ದರು. ಈ ವೇಳೆ ಅವರ ಬೆನ್ನಿಗೆ ಗಾಯವಾಗಿತ್ತು. ಇದೇ ಕಾರಣಕ್ಕೆ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ಮುಂಬರುವ ಬಾಂಗ್ಲಾದೇಶದ ವಿರುದ್ಧದ ಟಿ-20 ಸರಣಿಯಲ್ಲೂ ಪಾಂಡ್ಯ ಆಟವಾಡೋದು ಅನುಮಾನ.

Contact Us for Advertisement

Leave a Reply