ಸಿನಿಮಾ ಪ್ರಚಾರದ ವೇಳೆ ಮೈಮರೆತ ಸ್ಟಾರ್​ಗಳಿಗೆ ಸರ್ಕಾರದ ವಾರ್ನಿಂಗ್!

masthmagaa.com:

ಸಿನಿಮಾ ನಟ, ನಟಿಯರು ಹೋದಲ್ಲಿ ಜನ ಗುಂಪು ಸೇರೋದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಟ, ನಟಿಯರು ಮಾಸ್ಕ್ ಧರಿಸದೇ ಇರೋದನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಇವತ್ತು ಮಾತನಾಡಿರೋ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರೋ ಹಿನ್ನೆಲೆ ಸಿನಿಮಾ ನಟ, ನಟಿಯರು ಜನರನ್ನ ಗುಂಪು ಸೇರಿಸಬಾರದು. ಜೊತೆಗೆ ತಾವೂ ಕೂಡ ಮಾಸ್ಕ್ ಧರಿಸಬೇಕು, ನಿಮ್ಮ ಅಭಿಮಾನಿಗಳಿಗೂ ಮಾಸ್ಕ್ ಧರಿಸುವಂತೆ ಹೇಳಬೇಕು ಎಂದಿದ್ದಾರೆ. ಇತ್ತೀಚೆಗೆ ಕೆಲ ನಟ, ನಟಿಯರು ತಮ್ಮ ಸಿನಿಮಾದ ಪ್ರಚಾರದ ವೇಳೆ ಮಾಸ್ಕ್ ಹಾಕಿರಲಿಲ್ಲ. ಅಲ್ಲದೆ ಅವರನ್ನ ನೋಡಲು ಸಾವಿರಾರು ಜನ ಗುಂಪು ಸೇರಿದ್ದು ಮಾತ್ರವಲ್ಲದೆ, ಅವರಲ್ಲಿ ಹಲವರು ಮಾಸ್ಕ್ ಧರಿಸಿರಲಿಲ್ಲ.

-masthmagaa.com

Contact Us for Advertisement

Leave a Reply