‘ನನ್ನ ಪತ್ನಿಯನ್ನು ಕಳಿಸಿಕೊಡು ಭಾರತ’ :ಪಾಕ್‌ ಮಹಿಳೆ ಪತಿ ಮನವಿ

masthmagaa.com:

ಪಾಕಿಸ್ತಾನದಿಂದ ತನ್ನ PUBG ಲವರ್‌ಗಾಗಿ ಭಾರತಕ್ಕೆ ಬಂದು ಬಂಧಿಸಲ್ಪಟ್ಟಿದ್ದ ಪಾಕಿಸ್ತಾನ ಮಹಿಳೆ ಸೀಮಾಳ ಮೊದಲ ಪತಿ ಆಕೆಯನ್ನ ವಾಪಾಸ್‌ ಕಳಿಸುವಂತೆ ಭಾರತವನ್ನ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಸೌದಿ ಅರೇಬಿಯಾದಲ್ಲಿರುವ ಸೀಮಾಳ ಪತಿ ಗುಲಾಬ್ ಹೈದರ್, ವಿಡಿಯೋ ಮೆಸೇಜ್ ಒಂದನ್ನು ಕಳುಹಿಸಿದ್ದಾರೆ. ವಿಡಿಯೋದಲ್ಲಿ ಸೀಮಾಳನ್ನ ಮರಳಿ ಪಾಕಿಸ್ತಾನಕ್ಕೆ ಕಳುಹಿಸುವಂತೆ ಭಾರತ ಸರ್ಕಾರವನ್ನ ಮನವಿ ಮಾಡಿದ್ದಾರೆ. ಅಲ್ದೆ PUBG ಮೂಲಕ ಭಾರತಕ್ಕೆ ಬರುವಂತೆ ನನ್ನ ಪತ್ನಿಗೆ ಆಮಿಷವೊಡ್ಡಲಾಗಿದೆ ಅಂತ ಆರೋಪಿಸಿದ್ದಾರೆ. ಇತ್ತ ಜುಲೈ 4ರಂದು ಬಂಧಿಸಲ್ಪಟ್ಟಿದ್ದ ಸೀಮಾ ಹೈದರ್‌ ಹಾಗೂ ಆಕೆಯ ಪ್ರಿಯಕರ ಉತ್ತರ ಪ್ರದೇಶದ ಸಚಿನ್‌ ಜಾಮೀನು ಮೂಲಕ ಬಿಡುಗಡೆಯಾಗಿದ್ದಾರೆ. ಈ ವೇಳೆ ಮಾತಾಡಿರೋ ಸೀಮಾ ಹೈದರ್‌, ನನಗೂ ಮತ್ತು ಸಚಿನ್‌ಗೂ ಮದುವೆಯಾಗಿದ್ದು, ಜೊತೆಯಲ್ಲಿ ಜೀವನ ನಡೆಸುತ್ತಿದ್ದೇವೆ. ಈಗ ಭಾರತ ದೇಶ ನನ್ನದು ಹಾಗೂ ನನ್ನ ಗಂಡ ಹಿಂದೂ, ಹೀಗಾಗಿ ನಾನೂ ಹಿಂದೂ ಧರ್ಮಕ್ಕೆ ಸೇರಿದ್ದೇನೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಪಾಕಿಸ್ತಾನಕ್ಕೆ ವಾಪಸ್ ಹೋದರೆ ನನ್ನ ಹಾಗೂ ಮಕ್ಕಳ ಜೀವಕ್ಕೆ ಅಪಾಯವಿದೆ ನಾನು ಹೋಗುವುದಿಲ್ಲ. ಸಚಿನ್ ಜತೆಯೇ ಬದುಕುತ್ತೇನೆ ಅಂತ ಸೀಮಾ ಹೈದರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply