ಈ ವಿಮಾನ ಒಂದೇ ಗಂಟೆಯಲ್ಲಿ ಜಗತ್ತಿನ ಯಾವ ಮೂಲೆಗೆ ಬೇಕಾದ್ರೂ ಹೋಗುತ್ತೆ!

masthmagaa.com:

ಜಗತ್ತಿನಲ್ಲೇ ಅತಿ ವೇಗವಾಗಿ ಸಾಗಬಲ್ಲ ಸಾರಿಗೆ ವ್ಯವಸ್ಥೆ ಅಂದ್ರೆ ಅದು ವಿಮಾನ.. ಕೆಲವೇ ಕೆಲವು ಗಂಟೆಗಳಲ್ಲಿ ಬೇರೆ ದೇಶಗಳಿಗೆ ಕರ್ಕೊಂಡು ಹೋಗೋ ಸಾಮರ್ಥ್ಯ ವಿಮಾನಕ್ಕಿದೆ. ಅದೇ ಒಂದೇ ಒಂದು ಗಂಟೆಯಲ್ಲಿ ಜಗತ್ತಿನ ಯಾವುದೇ ಮೂಲೆಗೆ ಬೇಕಾದ್ರೂ ಹೋಗ್ಬೋದು ಅಂದ್ರೆ ಹೇಗಿರುತ್ತೆ. ಅಂಥದ್ದೊಂದು ಹೈಪರ್​​ಸೋನಿಕ್ ವಿಮಾನವನ್ನು ಅಮೆರಿಕದ ವೀನಸ್ ಏರೋಸ್ಪೇಸ್​ ಕಾರ್ಪೊರೇಷನ್ ಸಿದ್ಧಪಡಿಸ್ತಿದೆ. ಇದ್ರ ವೇಗ ಎಷ್ಟಿರುತ್ತೆ ಅಂದ್ರೆ ಒಂದೇ ಗಂಟೆಯಲ್ಲಿ ಜಗತ್ತಿನ ಯಾವ ಮೂಲೆಗೆ ಬೇಕಾದ್ರೂ ಹೋಗೋಕೆ ಸಾಧ್ಯವಾಗುತ್ತೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಂಸ್ಥೆ, ಅಮೆರಿಕದ ಲಾಸ್ ಎಂಜಲೀಸ್​ನಿಂದ ಜಪಾನ್​​ನ ಟೋಕಿಯೋಗೆ ಒಂದೇ ಗಂಟೆಯಲ್ಲಿ ಪ್ರಯಾಣಿಸುವಂತೆ ವಿಮಾನ ಸಿದ್ಧಪಡಿಸೋದು ನಮ್ಮ ಉದ್ದೇಶ ಅಂತ ಹೇಳಿದೆ. ಸದ್ಯ ಈ ಪ್ರಯಾಣಕ್ಕೆ ಅತೀ ವೇಗವಾಗಿ ಹೋಗೋ ವಿಮಾನಗಳಲ್ಲೂ 10ರಿಂದ 11 ಗಂಟೆ ಬೇಕಾಗುತ್ತೆ. ಹೀಗಾಗಿ ಇಷ್ಟು ವೇಗವನ್ನು ತಡೆದುಕೊಳ್ಳಲು ಮನುಷ್ಯನ ಶರೀರಕ್ಕೆ ಸಾಧ್ಯವಾಗಲ್ಲ. ಅದಕ್ಕೆ ತಕ್ಕಂತೆ ಸ್ಪೆಷಲ್ ಸೂಟ್​ ತಯಾರಿಸಬೇಕಾಗುತ್ತೆ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಆದ್ರೆ ಸಂಸ್ಥೆ ಮಾತ್ರ ಹೈಪರ್​ಸೋನಿಕ್ ತಂತ್ರಜ್ಞಾನದಿಂದ ಪ್ರಯಾಣಿಕರಿಗೆ ಏನೂ ತೊಂದ್ರೆಯಾಗಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply