‘ನನಗಿನ್ನೂ ಆ ಫೋಬಿಯಾ ಕಾಡ್ತಾ ಇದೆ’ : ಶಾರುಖ್ ಖಾನ್!

masthmagaa.com:

ನನಗೆ ಒಂದು ಫೋಬಿಯಾ ಇದೆ ಅಂತ ಶಾರುಖ್‌ ಖಾನ್‌ ಬಹಿರಂಗವಾಗಿ ಹೇಳಿದ್ದಾರೆ.
ಶಾರುಖ್‌ ಅಭಿನಯದ ಪಠಾಣ್ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಸಿಕ್ಕಿದೆ. ಶಾರುಖ್ ಖಾನ್ ಮೊದಲು ಮುಂಬೈಗೆ ಬಂದಾಗ ವಾಪಸ್ ಹೋಗಲು ಹಣವಿರಲಿಲ್ಲ. ಈಗ ಸಾವಿರಾರು ಕೋಟಿ ರೂ. ಒಡೆಯ. ಶಾರುಖ್ ಖಾನ್ ಇಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಅವರಿಗೆ ಇನ್ನೂ ಒಂದು ಭಯವಿದೆಯಂತೆ. ಆ ಫೋಬಿಯಾದಿಂದ ಹೊರಬರಲು ಅವರಿಗೆ ಸಾಧ್ಯವಾಗಲೇ ಇಲ್ಲ ಅಂತ ಹೇಳಿದ್ದಾರೆ.

ಕಿರುತೆರೆಯ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶಾರುಖ್‌ಗೆ ‘ಫೌಜಿ’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ನಂತರ ಹಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡು, 1992 ರಲ್ಲಿ ಸಿನಿಮಾ ರಂಗಕ್ಕೆ ಪ್ರವೇಶಿಸಿದರು. ಇಷ್ಟೆಲ್ಲಾ ಸಾಧನೆ ಮಾಡಿದ್ದ್‌ ಶಾರುಖ್‌ ಸಂದರ್ಶನವೊಂದರಲ್ಲಿ ತಮಗಿರುವ ಫೋಬಿಯಾ ಬಗ್ಗೆ ಮಾತನಾಡಿದ್ದಾರೆ.

ಶಾರುಖ್ ಖಾನ್ ಅವರದ್ದು ಐಕಾನಿಕ್ ಸ್ಟೈಲ್. ಹಗ್‌ ಮಾಡೋ ರೀತಿಯಲ್ಲಿ ಕೈಯನ್ನ ಎತ್ತುತ್ತಾರೆ. ಅನೇಕ ಸಿನಿಮಾಗಳಲ್ಲಿ ಈ ರೀತಿಯ ಶೈಲಿಯನ್ನ ಮಾಡಿದ್ದಾರೆ. ಆದರೆ, ಈ ಶೈಲಿಯನ್ನ ಮಾಡೋಕೆ ಭಯಪಡ್ತಾ ಇದೀನಿ ಅಂತ ಶಾರುಖ್ ಮಾತನಾಡಿದ್ದಾರೆ. ‘ನನಗೆ ಕತ್ತಲೆಯ ಭಯವಿಲ್ಲ. ನನಗೆ ಎತ್ತರದಲ್ಲಿ ನಿಂತಾಗ, ಕಂದಕವನ್ನ ನೋಡಿದಾಗಭಯ ಆಗೋದಿಲ್ಲ. ಆದರೆ, ಕೈ ಎತ್ತಿದರೆ ಭಯವಾಗುತ್ತದೆ. ಯಾರೋ ಕತ್ತರಿಸಿದಂತೆ ಭಾಸವಾಗುತ್ತದೆ. ಇದೊಂದು ವಿಚಿತ್ರ ಭಯ. ಈ ಭಯ ಇನ್ನೂ ಕೂಡ ನನಗೆ ಬಹಳಷ್ಟು ತೊಂದರೆ ನೀಡ್ತಾನೆ ಇದೆ.” ಎಂದು ಹೇಳಿದ್ದಾರೆ.

ಸದ್ಯ ಶಾರುಖ್‌ ಖಾನ್‌ ‘ಜವಾನ್’ ಮತ್ತು ‘ಡಂಕಿ’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

-masthmagaa.com

Contact Us for Advertisement

Leave a Reply