ಪಿಒಕೆಯಲ್ಲಿ ಗೆದ್ದು ಬೀಗಿದ ಇಮ್ರಾನ್‌ ಖಾನ್‌ ಪಕ್ಷ

masthmagaa.com:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್ ಇ ಇನ್ಸಾಫ್ ಪಕ್ಷ ಜಯಬೇರಿ ಬಾರಿಸಿದೆ. ಇಲ್ಲಿ ಸಾಮಾನ್ಯವಾಗಿ ಪಾಕಿಸ್ತಾನದಲ್ಲಿ ಅಧಿಕಾರದಲ್ಲಿರೋ ಪಕ್ಷವೇ ಅಧಿಕಾರಕ್ಕೆ ಬರುತ್ತೆ. ಹೀಗಾಗಿ ಈ ಪ್ರದೇಶದ ಚುನಾವಣೆ ಬಗ್ಗೆ ಯಾವುದೇ ಪಕ್ಷಗಳು ಜಾಸ್ತಿ ತಲೆ ಕೆಡಿಸಿಕೊಳ್ಳಲ್ಲ. ಆದ್ರೆ ಈ ಸಲ ಮಾತ್ರ ಈ ಚುನಾವಣೆಯನ್ನು ಎಲ್ಲಾ ಪಕ್ಷಗಳು ಸೀರಿಯಸ್ಸಾಗಿ ತಗೊಂಡು ಕದನಕಣಕ್ಕೆ ಜಿಗಿದಿದ್ವು. 53 ಸ್ಥಾನಗಳಿರೋ ಈ ಪಿಒಕೆ ಅಸೆಂಬ್ಲಿಯಲ್ಲಿ 45 ಸ್ಥಾನಗಳಿಗೆ ನೇರ ಚುನಾವಣೆ ನಡೆಸಲಾಗುತ್ತೆ. ಉಳಿದ 5 ಸೀಟು ಮಹಿಳೆಯರಿಗೆ ಮತ್ತು 3 ಸೀಟು ತಜ್ಞರಿಗೆ ಮೀಸಲಿರುತ್ತೆ. ಅದರಂತೆ ಈ ಸಲ 45 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಪಕ್ಷ ತೆಹ್ರೀಕ್ ಇ ಇನ್ಸಾಫ್ 25 ಸ್ಥಾನ ಗೆದ್ದುಕೊಂಡಿದೆ. ಇನ್ನುಳಿದಂತೆ ಬಿಲಾವಲ್ ಭುಟ್ಟೋ ಅವರ ಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಕ್ಷ 11, ಮಾಜಿ ಪ್ರಧಾನಿ ನವಾಜ್ ಷರೀಫ್ ಪಕ್ಷ ಪಿಎಂಎಲ್​ಎನ್​ 6 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಇದೇ ಪಿಎಂಎಲ್​ಎನ್​​ ಅಧಿಕಾರಕ್ಕೆ ಬಂದಿತ್ತು.

-masthmagaa.com

Contact Us for Advertisement

Leave a Reply