ದೇಶದಲ್ಲಿ ಎಷ್ಟು ಮಂದಿ ಐಸಿಯುನಲ್ಲಿದ್ಧಾರೆ ಗೊತ್ತಾ?

masthmagaa.com:

ದೇಶದ 180 ಜಿಲ್ಲೆಗಳಲ್ಲಿ ಕಳೆದ 7 ದಿನಗಳಿಂದ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗಿಲ್ಲ ಅಂತ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಅದೇ ರೀತಿ ದೇಶ 18 ಜಿಲ್ಲೆಗಳಲ್ಲಿ 14 ದಿನಗಳಿಂದ ಒಂದೇ ಒಂದು ಸೋಂಕು ಪತ್ತೆಯಾಗಿಲ್ಲ. 54 ಜಿಲ್ಲೆಗಳಲ್ಲಿ 21 ದಿನಗಳಿಂದ ಒಂದೂ ಸೋಂಕು ಪತ್ತೆಯಾಗಿಲ್ಲ ಅಂತ ಮಾಹಿತಿ ನೀಡಿದ್ಧಾರೆ. ಇನ್ನು ದೇಶದಲ್ಲಿ ಒಟ್ಟು 4,88,861 ರೋಗಿಗಳ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ಐಸಿಯುನಲ್ಲಿದ್ದಾರೆ. ಅದೇ ರೀತಿ 1,70,841 ಮಂದಿ ವೆಂಟಿಲೇಟರ್​​ನಲ್ಲಿದ್ದು, 9,02,291 ಮಂದಿ ಆಕ್ಸಿಜನ್ ಸಪೋರ್ಟ್​​ನಲ್ಲಿದ್ದಾರೆ ಅಂತ ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply