ಕಿಮ್ ಕೋಟೆಯಲ್ಲಿ ಭಾರಿ ಪ್ರವಾಹ..1100 ಮನೆಗಳಿಗೆ ಹಾನಿ!

masthmagaa.com:

ಉತ್ತರ ಕೊರಿಯಾದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಸಂಭವಿಸಿದೆ. ಇದ್ರಲ್ಲಿ 1100 ಮನೆಗಳಿಗೆ ಹಾನಿಯಾಗಿದ್ದು, ಬೆಳೆ, ರಸ್ತೆಯೆಲ್ಲಾ ಕೊಚ್ಚಿ ಹೋಗಿವೆ. ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಮೊದಲಿಗೆ ಉಪಗ್ರಹ ಚಿತ್ರಗಳಿಂದ ಮಾಹಿತಿ ಲಭ್ಯವಾಗಿತ್ತು. ಆದ್ರೀಗ ಅಲ್ಲಿನ ಸರ್ಕಾರಿ ಮಾಧ್ಯಮ ಕೆಸಿಟಿವಿಯಲ್ಲೇ ಈ ಬಗ್ಗೆ ವರದಿ ಪ್ರಕಟವಾಗಿದೆ. ಮನೆಗಳು ಕೊಚ್ಚಿಹೋಗಿರೋದು, ಬೆಳೆ ನಾಶವಾಗಿರೋದು, ರಸ್ತೆ ತುಂಬಾ ನೀರು ತುಂಬಿಕೊಂಡಿದ್ದು, ಸೇತುವೆಗೆ ಹಾನಿಯಾಗಿರೋದನ್ನು ಫೋಟೋಗಳಲ್ಲಿ ಗಮನಿಸಬಹುದಾಗಿದೆ. ಬೆಳೆಗೆ ಹಾನಿಯಾಗಿರೋದ್ರಿಂದ ಉತ್ತರ ಕೊರಿಯಾದಲ್ಲಿ ಆಹಾರ ಸಾಮಗ್ರಿಗಳ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾಕಂದ್ರೆ ಕೊರೋನಾ ತಡೆಯಲು ತನ್ನ ಗಡಿಗಳನ್ನು ಬಂದ್ ಮಾಡಿಕೊಂಡಿರೋ ಉತ್ತರ ಕೊರಿಯಾ, ವಿದೇಶಿ ವಸ್ತುಗಳ ಆಮದಿನ ಮೇಲೂ ನಿರ್ಬಂಧ ವಿಧಿಸಿಬಿಟ್ಟಿದೆ.

-masthmagaa.com

Contact Us for Advertisement

Leave a Reply