ಭಾರತ-ಚೀನಾ ಗಡಿ ಸಂಘರ್ಷ! ಬೀಜಿಂಗ್‌ನಲ್ಲಿ 29ನೇ ಸುತ್ತಿನ ಮಾತುಕತೆ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಚೀನಾ ಹಾಗೂ ಭಾರತದ ನಡುವೆ ಗಡಿ ವಿಚಾರವಾಗಿ ಉನ್ನತದ ಮಟ್ಟದ ಮಾತುಕತೆ ಆಗಿದೆ. ಭಾರತದ ವಿದೇಶಾಂಗ ಇಲಾಖೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ಬೀಜಿಂಗ್‌ನಲ್ಲಿ ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆ ಬಗೆಹರಿಸೋ ವಿಚಾರವಾಗಿ 29ನೇ ಸುತ್ತಿನ ಮಾತುಕತೆ ಮಾಡಲಾಗಿತ್ತು. ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಒಬ್ರಿಗೊಬ್ರು ಕಾಂಟ್ಯಾಕ್ಟ್‌ನಲ್ಲಿರೋಕೆ ಒಪ್ಪಿಕೊಂಡಿದ್ದೇವೆ. ಎರಡೂ ದೇಶಗಳು ಶಾಂತಿ ಹಾಗೂ ಸ್ಥಿರತೆ ಕಾಪಾಡುವ ಬಗ್ಗೆ ತಮ್ಮ ಆಸಕ್ತಿ ತೋರಿಸಿವೆ.. ಲೈನ್‌ಆಫ್‌ ಆಕ್ಚುವಲ್‌ ಕಂಟ್ರೋಲ್‌ ಅಂದ್ರೆ ಎಲ್‌ಎಸಿಯುದ್ದಕ್ಕೂ ಸಂಪೂರ್ಣವಾಗಿ ಶಾಂತಿ ಸ್ಥಾಪಿಸಿ ಉದ್ವಿಗ್ನತೆ ಕಡಿಮೆ ಮಾಡುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದೇವೆ ಅಂತ ಭಾರತ ತನ್ನ ಹೇಳಿಕೆಯಲ್ಲಿ ಪ್ರಕಟ ಮಾಡಿದೆ.

-masthmagaa.com

Contact Us for Advertisement

Leave a Reply