ಚೀನಾ ವಿರುದ್ದ ಭಾರತ ಜಲಾಸ್ತ್ರ!

masthmagaa.com:

ದಕ್ಷಿಣ ಚೀನಾ ಸಮುದ್ರದಲ್ಲಿ ತಾನೇ ಸಾರ್ವಭೌಮ ಅಂತ ಮರೆಯುತ್ತಿರೋ ಚೀನಾದ ಮೇಲೆ ಭಾರತ ವಾಕ್‌ ಪ್ರಹಾರ ಮಾಡಿದೆ. ದಕ್ಷಿಣ ಚೀನಾ ಸಮುದ್ರದ ಅಧಿಕಾರಕ್ಕೆ ಸಂಬಂಧಪಟ್ಟಂತೆ ಇರೋ ಕಾನೂನನ್ನ ಸರಿಯಾಗಿ ಪಾಲಿಸಿ ಅಂತ ಚೀನಾಗೆ ಭಾರತ ತಾಕೀತು ಮಾಡಿದೆ.ಭಾರತ ಪ್ರವಾಸದಲ್ಲಿರೋ ಪಿಲಿಫೈನ್ಸ್‌ ವಿದೇಶಾಂಗ ಸಚಿವ ಎನ್ರಿಕ್‌ ಮನಾಲೋ ಅವ್ರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದಕ್ಷಿಣ ಚೀನಾ ಸಮುದ್ರದ ವಿವಾದಕ್ಕೆ ಸಂಬಂಧಿಸಿದಂತೆ 2016ರ ಕಾನೂನು ಬದ್ಧ ತೀರ್ಪಿಗೆ ಚೀನಾ ಕಮ್ಮಿಟ್‌ ಆಗಿರಬೇಕು ಅಂತ ಚೀನಾಗೆ ಜೈ ಶಂಕರ್ ಕರೆ ಕೊಟ್ಟಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತ ಚೀನಾಗೆ ನೇರವಾಗಿ ವಾರ್ನಿಂಗ್‌ ಕೊಟ್ಟಂತೆ ಆಗಿದೆ. ಯಾಕಂದ್ರೆ ದಕ್ಷಿಣ ಚೀನಾ ಸಮುದ್ರದ ಹಕ್ಕುಗಳಿಗೆ ಸಂಬಂಧಪಟ್ಟಂತೆ ದೊಡ್ಡ ವಿವಾದ ಇದ್ದು ಭಾರತ ಈ ವಿಚಾರದಲ್ಲಿ ಇಷ್ಟು ದಿನ ತಲೆಕೆಡಿಸಿಕೊಂಡಿರಲಿಲ್ಲ. ಜಪಾನ್‌, ದಕ್ಷಿಣ ಕೊರಿಯಾ ಹಾಗೇ ಫಿಲಿಫೈನ್ಸ್‌ ದೇಶಗಳ ಜೊತೆಗೆ ಅಮೆರಿಕ ಮಾತ್ರ ಚೀನಾ ಜೊತೆಗೆ ಸೌತ್‌ ಚೀನಾ ಸಮುದ್ರದ ವಿಚಾರದಲ್ಲಿ ಜಗಳ ಆಡ್ತವೆ. ಭಾರತ ಈ ವಿಚಾರದಲ್ಲಿ ಅಷ್ಟೊಂದು ಅಗ್ರೆಸ್ಸಿವ್‌ ಆಗಿ ನಡೆದುಕೊಂಡಿರಲಿಲ್ಲ. ಚೀನಾ ದಕ್ಷಿಣ ಸಮುದ್ರ ವಿವಾದಯನ್ನ ಬರೀ ಶಾಂತಿಯುತವಾಗಿ ಮಾತುಕತೆ ನಡೆಸೋ ಮೂಲಕ ಬಗೆಹರಿಸಿಕೊ‍ಳ್ಳಬೇಕು ಅಂತಷ್ಟೇ ಭಾರತ ಹೇಳ್ತಾ ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ಚೀನಾದ ವಿರೊಧಿ ಅಂತಲೇ ಗುರುತಿಸಿಕೊಂಡಿರೋ ಫಿಲಿಫೈನ್ಸ್‌ ಜೊತೆಗೆ ನಿಂತು ಚೀನಾ ಈ ವಿಚಾರದಲ್ಲಿ ಕಾನೂನು ಪಾಲಿಸಬೇಕು ಅಂತ ಹೇಳಿದೆ. ಅಂದ್ಹಾಗೆ ಜುಲೈ 2016ರಲ್ಲಿ ವಿಶ್ವಸಂಸ್ಥೆಯ ಮಧ್ಯಂತರ ನ್ಯಾಯಮಂಡಳಿಯಲ್ಲಿ ಚೀನಾ ದಕ್ಷಿಣ ಸಮುದ್ರಲ್ಲಿನ ಆಕ್ರಮಣಕಾರಿ ನೀತಿ ವಿರುದ್ಧ ಪಿಲಿಫೈನ್ಸ್‌ ಅರ್ಜಿ ಸಲ್ಲಿಸಿತ್ತು. ಈ ವೇಳೆ ವಿಶ್ವಸಂಸ್ಥೆಯ ಕನ್ವೆಷನ್‌ ಮಧ್ಯಂತರ ಟ್ರುಬ್ಯೂನಲ್‌ ಪಿಲಿಫೈನ್ಸ್‌ ಪರವಾಗಿ ತೀರ್ಪು ನೀಡಿತ್ತು. ಆದ್ರೆ ಈ ತೀರ್ಪನ್ನ ಚೀನಾ ನಿರಾಕರಿಸಿದೆ.

-masthmagaa.com

Contact Us for Advertisement

Leave a Reply