ನ್ಯಾಯ ಯಾತ್ರೆಗೂ ಮುನ್ನ ವರ್ಚುವಲ್ ಮೀಟಿಂಗ್‌ ನಡೆಸಿದ INDIA!

masthmagaa.com:

ವಿರೋಧ ಪಕ್ಷಗಳ I.N.D.I ಮೈತ್ರಿ ಕೂಟದ ಸಾರಥಿಯಾಗಿ.. ಒಕ್ಕೂಟದ ಪ್ರೆಸಿಡೆಂಟ್‌ ಆಗಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲ್ಲೋಕೆ ಕಾರ್ಯತಂತ್ರ ಹೆಣೆದಿರೋ I.N.D.I ಮೈತ್ರಿ ಕೂಟ ಲೋಕಸಭೆ ಸೀಟು ಹಂಚಿಕೆ ವಿಚಾರವಾಗಿ ವರ್ಚುವಲ್‌ ಸಭೆ ನಡೆಸಿದೆ. ಈ ಸಭೆಯಲ್ಲಿ ಸರ್ವಾನುಮತದಿಂದ ಖರ್ಗೆ ಅವ್ರಿಗೆ ಮೈತ್ರಿ ಕೂಟದ ಚುಕ್ಕಾಣಿ ಕೊಡಲಾಗಿದೆ. ಆ ಮೂಲಕ I.N.D.I ಒಕ್ಕೂಟ ಅಲ್ಪ ಸಂಖ್ಯಾತ ಮತಗಳೊಂದಿಗೆ ದಲಿತ ಮತಗಳನ್ನೂ ಭದ್ರ ಮಾಡ್ಕೊಂಡಿದೆ ಅಂತ ವಿಶ್ಲೇಷಿಸಲಾಗ್ತಿದೆ. ಇನ್ನು ಈ ವರ್ಚುವಲ್ ಮೀಟಿಂಗ್‌ನಲ್ಲಿ ಮೈತ್ರಿಕೂಟದ ಎಲ್ಲಾ ನಾಯಕರು ಜಾಯಿನ್‌ ಆಗಿದ್ರು. ಆದ್ರೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೇರೆ ಕಾರ್ಯಕ್ರಮ ನಿಗದಿಯಾಗಿದ್ರಿಂದ ಭಾಗಿಯಾಗಿಲ್ಲ ಅಂತ TMC ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಅಂದ್ಹಾಗೆ ಸಭೆಯಲ್ಲಿ ಭಾರತ ನ್ಯಾಯ ಯಾತ್ರಾ ರ್ಯಾಲಿ ಬಗ್ಗೆ, ಹಾಗೆಯೇ ಲೋಕಸಭೆ ಸೀಟು ಹಂಚಿಕೆ ವಿಚಾರಗಳ ಬಗ್ಗೆ ಡಿಸ್‌ಕಸ್‌ ಮಾಡಲಾಗಿದೆ. ಇನ್ನು ಈ ಮೀಟಿಂಗ್‌ ಬಗ್ಗೆ ಬಿಜೆಪಿ ಕಾಲೆಳೆದಿದೆ. I.N.D.I ಒಕ್ಕೂಟವನ್ನ ಅಸ್ಥಿತ್ವ ಇಲ್ಲದ ಒಕ್ಕೂಟ ಅಂತ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ʻವರ್ಚುವಲ್‌ ಒಕ್ಕೂಟ ವರ್ಚುವಲ್‌ ಸಭೆ ನಡೆಸಿದೆ. ಇಲ್ಲಿರೋರಿಗೆ ಎರಡು ಅಜೆಂಡಾ ಇದೆ ಅಷೆ. ಒಂದು ತಮ್ಮ ಕುಟುಂಬಗಳನ್ನ ಉಳಿಸಿಕೊಳ್ಳೋದು, ಇನ್ನೊಂದು ತಮ್ಮ ಆಸ್ತಿ-ಪಾಸ್ತಿ ಉಳಿಸಿಕೊಳ್ಳೋದುʼ ಅಂತ ಟ್ರಾಲ್‌ ಮಾಡಿದ್ದಾರೆ. ಇನ್ನೊಂದು ಕಡೆ ಒಕ್ಕೂಟದ ಪ್ರಮುಖ ಸದಸ್ಯ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ED ಮತ್ತೊಮ್ಮೆ ಸಮನ್ಸ್‌ ನೀಡಿದೆ. ಲಿಕ್ಕರ್‌ ಸ್ಕ್ಯಾಮ್‌ ಕೇಸ್‌ನಲ್ಲಿ ಕೇಜ್ರಿವಾಲ್‌ಗೆ ನಾಲ್ಕನೆ ಬಾರಿ ಸಮನ್ಸ್‌ ನೀಡಲಾಗಿದೆ.

-masthmagaa.com

Contact Us for Advertisement

Leave a Reply