ಮತ್ತೆ ಅರುಣಾಚಲ ಪ್ರದೇಶದಲ್ಲಿ ಮೂಗು ತೂರಿಸಿದ ಚೀನೀ ಯೋಧರು!

masthmagaa.com:

ಕಳೆದ ತಿಂಗಳು ಉತ್ತರಾಖಂಡ್​​ನ ಗಡಿಯಲ್ಲಿ ಕುದುರೆ ಮೂಲಕ ಎಲ್​ಎಸಿ ದಾಟಿ ಬಂದು ವಾಪಸ್ ಹೋಗಿದ್ದ ಚೀನೀ ಸೈನಿಕರು ಕಳೆದ ಅರುಣಾಚಲ ಪ್ರದೇಶದಲ್ಲಿ ಮೂಗು ತೂರಿಸಿದ್ದಾರೆ. ಈ ವೇಳೆ ಚೀನೀ ಯೋಧರನ್ನು ಭಾರತೀಯ ಯೋಧರು ತಡೆದಿದ್ದಾರೆ. ಇದ್ರಿಂದ ಉಭಯದೇಶಗಳ ಸೈನಿಕರು ಮುಖಾಮುಖಿಯಾಗಿದ್ದು ಸಂಘರ್ಷದ ವಾತಾವರಣ ನಿರ್ಮಾಣವಾಗಿ ಹಲವು ಗಂಟೆಗಳ ಕಾಲ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು. ಟಿಬೆಟ್ ಮೂಲಕ ಅರುಣಾಚಲ ಪ್ರದೇಶದ ತವಾಂಗ್​​ಗೆ ಹಲವು ಚೀನೀ ಯೋಧರು ಬಂದಿದ್ದಾರೆ. ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಇರೋ ಬಮ್​ಲಾ ಪಾಸ್ ಮತ್ತು ಯಾಂಗ್​​ಸ್ಟೇಯಲ್ಲಿದ್ದ ಭಾರತದ ಕೆಲ ಬಂಕರ್​​ಗಳನ್ನು ನಾಶ ಮಾಡೋಕೆ ಯತ್ನಿಸಿದ್ರು. ಇದೇ ವೇಳೆ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು ಚೀನೀ ಯೋಧರನ್ನು ವಶಕ್ಕೆ ಪಡೆದಿದ್ದಾರೆ. ನಂತರ ಉನ್ನತ ಮಟ್ಟದ ಮಿಲಿಟರಿ ಕಮಾಂಡರ್​ಗಳು ಮಾತುಕತೆ ಮೂಲಕ ವಿವಾದ ಬಗೆಹರಿಸಿದ್ದು, ವಶದಲ್ಲಿದ್ದ ಚೀನೀ ಯೋಧರನ್ನು ಭಾರತೀಯ ಯೋಧರು ಬಿಟ್ಟು ಕಳುಹಿಸಿದ್ದಾರೆ. ಆದ್ರೆ ನಂತರ ಎರಡು ಕಡೆಯ ಯೋಧರು ಹಿಂದೆ ಸರಿದಿದ್ದರಿಂದ ಯಾವುದೇ ಸಾವು ನೋವಿನ ಘಟನೆಗಳು ವರದಿಯಾಗಿಲ್ಲ ಅಂತ ಗೊತ್ತಾಗಿದೆ. ಅಂದಹಾಗೆ ಈ ಭಾಗದಲ್ಲಿ ಆಗಾಗ್ಗೆ ಚೀನಾ ಗಡಿ ನುಗ್ಗೋ ಕೆಲಸ ಮಾಡ್ತಾನೇ ಇರುತ್ತೆ.

-masthmagaa.com

Contact Us for Advertisement

Leave a Reply