2 ಲಸಿಕೆ, 1 ಕೊರೊನಾ ಮಾತ್ರೆಗೆ ಗ್ರೀನ್ ಸಿಗ್ನಲ್ ಕೊಟ್ಟ ಭಾರತ!

masthmagaa.com:

ಒಮೈಕ್ರಾನ್ ಭೀತಿ ಬೆನ್ನಲ್ಲೇ ಭಾರತದಲ್ಲಿ ಮತ್ತೆರಡು ಲಸಿಕೆ ಮತ್ತು ಆ್ಯಂಟಿ ವೈರಲ್ ಮಾತ್ರೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಕಾರ್ಬೇವ್ಯಾಕ್ಸ್​​ ಮತ್ತು ಕೋವೋವ್ಯಾಕ್ಸ್​​​ ಲಸಿಕೆಗಳು.. ಇದು ಸ್ಪೈಕ್ ಪ್ರೊಟೀನ್ ಮೇಲೆ ದಾಳಿ ನಡೆಸೋ ಲಸಿಕೆ. ಭಾರತದಲ್ಲೇ ಸ್ವದೇಶಿಯಾಗಿ ಉತ್ಪಾದಿಸಿದ ಲಸಿಕೆ ಇದು. ಹೈದ್ರಾಬಾದ್ ಮೂಲದ ಬಯಾಲಾಜಿಕಲ್ ಇ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇನ್ನು ಕೋವೋವ್ಯಾಕ್ಸ್​ ನ್ಯಾನೋಪಾರ್ಟಿಕಲ್ ಲಸಿಕೆಯಾಗಿದ್ದು, ಇದನ್ನು ಪುಣೆಯ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಲಿದೆ. ಈ ಮೂಲಕ ದೇಶದಲ್ಲಿ ಒಟ್ಟು 8 ಲಸಿಕೆಗಳ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದಂತಾಗಿದೆ. ಇನ್ನು ಮೊಲ್ನೋಪಿರಾವಿರ್​​​ ಅನ್ನೋ ಮಾತ್ರೆಯನ್ನು ಭಾರತದಲ್ಲಿ 13 ಸಂಸ್ಥೆಗಳು ಅಭಿವೃದ್ಧಿಪಡಿಸ್ತಿದ್ದು, ವಯಸ್ಕರಿಗೆ ಕೊರೋನಾ ಬಂದು ಸೀರಿಯಸ್ ಆದ್ರೆ ಮಾತ್ರ ಇದನ್ನು ಬಳಸಲು ಅನುಮತಿಸಲಾಗಿದೆ. ಇತ್ತೀಚೆಗೆ ಅಮೆರಿಕದಲ್ಲೂ ಈ ಮಾತ್ರೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು.

-masthmagaa.com

Contact Us for Advertisement

Leave a Reply