ಗಡಿಯಲ್ಲಿ ಪಾಕಿಸ್ತಾನ, ಚೀನಾಗೆ ಟಕ್ಕರ್‌ ಕೊಡಲು ಭಾರತ ಮಾಡಿದ್ದೇನು?

masthmagaa.com:

ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಚೀನಾ ಹಾಗೂ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡೋಕೆ ಭಾರತ ಎಲ್ಲಾ ರೀತಿಯಲ್ಲೂ ತನ್ನ ಭದ್ರತೆಯನ್ನ ಹೆಚ್ಚಿಸಿಕೊಳ್ತಿದೆ. ಇದೀಗ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಮಿಗ್‌-21 ಫೈಟರ್‌ ಏರ್‌ಕ್ರಾಫ್ಟ್‌ನ ಜಾಗಕ್ಕೆ ಮಿಗ್‌-29 ನಿಯೋಜಿಸಲಾಗಿದೆ. ಉತ್ತರದ ರಕ್ಷಕ ಅಂತನೂ ಕರೆಯಲ್ಪಡುವ ಟ್ರೈಡೆಂಟ್ಸ್ ಸ್ಕ್ವಾಡ್ರನ್​​ ಮಿಗ್ -29ನ್ನ ನವೀಕರಿಸಲಾಗಿದ್ದು, ಯುದ್ಧದ ಸಮಯದಲ್ಲಿ ಶತ್ರುಗಳ ಯುದ್ಧ ವಿಮಾನ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಅಂತ ಸೇನಾಧಿಕಾರಿಗಳು ಹೇಳಿದ್ದಾರೆ. ಅಷ್ಟೆ ಅಲ್ದೆ ಈ ಫೈಟರ್‌ ಜೆಟ್‌ ಹೆಚ್ಚು ಹೊತ್ತು ಆಕಾಶದಲ್ಲಿ ಹಾರಡುವ ಸಾಮರ್ಥ್ಯವನ್ನು ಹೊಂದಿದ್ದು, ರಾತ್ರಿ ಹೊತ್ತಿನಲ್ಲು ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply