ಮಯನ್ಮಾರ್‌ ಹಿಂಸಾಚಾರ, ಅಸ್ಥಿರತೆಗೆ ಭಾರತದಿಂದ ಕಳವಳ!

masthmagaa.com:

ನೆರೆಯ ದೇಶ ಮಯನ್ಮಾರ್‌ನಲ್ಲಿ ನಡೀತಿರೋ ಹಿಂಸಾಚಾರ ಮತ್ತು ಅಸ್ಥಿರತೆ ಬಗ್ಗೆ ಇದೀಗ ಭಾರತ ಕಳವಳ ವ್ಯಕ್ತ ಪಡಿಸಿದೆ. ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಮಯನ್ಮಾರ್‌ ಎದುರಿಸ್ತಿರೋ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ʻಮಯನ್ಮಾರ್‌ನಲ್ಲಿ ಪರಿಸ್ಥಿತಿ ಹದಗೆಟ್ತಿರೋದನ್ನ ನೋಡಿದ್ರೆ ಚಿಂತೆಯಾಗುತ್ತೆ. ಇದ್ರಿಂದ ಭಾರತದ ಮೇಲೂ ಡೈರೆಕ್ಟ್‌ ಪರಿಣಾಮ ಬೀರ್ತಿದೆ. ಆದ್ರಿಂದ ಮಯನ್ಮಾರ್‌ನಲ್ಲಿ ಹಿಂಸಾಚಾರಗಳು ಕೊನೆಯಾಗ್ಬೇಕು. ಅಲ್ಲಿ ಪ್ರಜಾಪ್ರಭುತ್ವ ಬರ್ಬೇಕು ಅಂತ ಭಾರತ ಬಹಳ ಟೈಮ್‌ನಿಂದ ಸಪೋರ್ಟ್‌ ನೀಡ್ತಾನೇ ಬಂದಿದೆʼ ಅಂದಿದ್ದಾರೆ. ಅಂದ್ಹಾಗೆ 2021ರಲ್ಲಿ ಮಯನ್ಮಾರ್‌ ಮಿಲಿಟರಿ ಆಳ್ವಿಕೆ ಶುರು ಮಾಡಿದಾಗ್ಲಿಂದ, ಮಿಲಿಟರಿ ಹಾಗೂ ಬಂಡುಕೋರ ಗುಂಪುಗಳ ನಡುವೆ ಹಿಂಸಾಚಾರಗಳು ಜಾಸ್ತಿಯಾಗಿ ಅಸ್ಥಿರತೆ ಉಂಟಾಗಿದೆ.

-masthmagaa.com

Contact Us for Advertisement

Leave a Reply