ಮಯನ್ಮಾರ್‌ ಜೊತೆಗಿನ ಗಡಿಗೆ‌ ಬೇಲಿ: ಭಾರತದಿಂದ ಬೃಹತ್‌ ಮೊತ್ತ ಖರ್ಚು!

masthmagaa.com:

ಮಯನ್ಮಾರ್‌ ಜೊತೆಗಿನ ತನ್ನ ಗಡಿಯುದ್ದಕ್ಕೂ ಸುಮಾರು 1610 ಕಿಲೋ ಮೀಟರ್‌ ಉದ್ದದ ತಂತಿ ಬೇಲಿಗಳನ್ನ ಅಳವಡಿಸಲು ಭಾರತ ಪ್ಲ್ಯಾನ್‌ ಹಾಕೊಂಡಿದೆ. ಮುಂದಿನ 10 ವರ್ಷಗಳಲ್ಲಿ ಭಾರತ ಸುಮಾರು 3.7 ಬಿಲಿಯನ್‌ ಡಾಲರ್‌ ಅಂದ್ರೆ 30ವರೆ ಸಾವಿರ ಕೋಟಿ ರೂಪಾಯಿ ಖರ್ಚು ಮಾಡೋಕೆ ಮುಂದಾಗಿದೆ. ಮಯನ್ಮಾರ್‌ನಿಂದ ಬರೋ ಅಕ್ರಮ ವಲಸಿಗರನ್ನ ತೆಡೆಯೊಕೆ ಹಾಗೂ ಗಡಿಯಲ್ಲಿ ಇತರ ಅಪರಾಧ ಕೃತ್ಯಗಳನ್ನ ಮಟ್ಟ ಹಾಕಲು ಭಾರತ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಅಂದ್ಹಾಗೆ ಇದೇ ವರ್ಷ ಆರಂಭದಲ್ಲಿ ಕೇಂದ್ರ ಸರ್ಕಾರ ಮಯನ್ಮಾರ್‌ ನಾಗರಿಕರಿಗೆ ಕಳೆದ 10 ವರ್ಷಗಳಿಂದ ಚಾಲ್ತಿಯಲ್ಲಿದ್ದ ಓಲ್ಡ್‌ ವಿಸಾ ಫ್ರಿ ಪಾಲಿಸಿಯನ್ನ ನಿಲ್ಲಿಸಿತ್ತು. ಈಶಾನ್ಯ ರಾಜ್ಯಗಳ ಜನಸಂಖ್ಯೆಯನ್ನ ನಿಯಂತ್ರಿಸಲು ಹಾಗೂ ರಾಷ್ಟ್ರೀಯ ಭದ್ರತೆಯನ್ನ ಹೆಚ್ಚಿಸಲು ಈ ಕ್ರಮ ಅಂತ ಭಾರತ ಹೇಳಿತ್ತು. ಆದ್ರೆ ಮಯನ್ಮಾರ್‌ ಮಾತ್ರ ಭಾರತದ ಯಾವುದೇ ಕ್ರಮಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಮಯನ್ಮಾರ್‌ನಲ್ಲಿ 2021ರಿಂದ ಸೇನಾ ಸರ್ಕಾರ ಆಡಳಿತ ನಡೆಸ್ತಿದ್ದು ಅದಕ್ಕೆ ಅಲ್ಲಿ ಭಾರಿ ವಿರೋಧ ವ್ಯಕ್ತವಾಗ್ತಿವೆ. ಹಿಂಸಾಚಾರಗಳು ಜೋರಾಗ್ತಿವೆ. ಸೇನಾ ಸರ್ಕಾರದ ವಿರುದ್ದ ಬಂಡೆದ್ದಿರೋ ಜನ ಭಾರತದತ್ತ ಹಿಂದೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪಲಾಯನ ಮಾಡ್ತಿದ್ದಾರೆ. ಕಳೆದ ವರ್ಷ ಮಯನ್ಮಾರ್‌ ಬಾರ್ಡರ್‌ನಲ್ಲಿರೊ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದಿದ್ದಾಗ ಅದರ ಹಿಂದೆ ಮಯನ್ಮಾರ್‌ ಪ್ರಜೆಗಳೂ ಇದ್ರೂ ಅನ್ನೋ ಗಂಭೀರ ಆರೋಪ ಕೇಳಿಬಂದಿತ್ತು. ಅಲ್ದೆ ಮಯನ್ಮಾರ್‌ನ ಭಾರತ ವಿರೋಧಿ ಗುಂಪುಗಳೀಗೆ ಚೀನಾ ಆರ್ಥಿಕ ಹಾಗೂ ಹಣಕಾಸು ಸಹಾಯ ಮಾಡುತ್ತೆ ಅಂತ ಸೇನಾಧಿಕಾರಿಗಳೇ ಮಾಹಿತಿ ಕೊಟ್ಟಿದ್ರು. ಹೀಗಾಗಿ ಭಾರತ ಈ ದೊಡ್ಡ ಕ್ರಮಕ್ಕೆ ಮುಂದಾಗಿದೆ. ನಿಮಗೆ ಗೊತ್ತಿರಬೋದು. ಬಾಂಗ್ಲಾದಲ್ಲೂ ಈಗಾಗಲೇ ರೊಹಿಂಗ್ಯಾ ಮುಸ್ಲಿಮರು ಲಕ್ಷಾಂತರ ಪ್ರಮಾಣದಲ್ಲಿ ಶೆಲ್ಟರ್‌ಗಳನ್ನ ಹಾಕೊಂಡು ವಾಸಿಸ್ತಿದ್ದಾರೆ. ಅವರನ್ನ ಎಲ್ಲಿಗೆ ಕಳುಹಿಸಬೇಕು ಅಂತಾನೂ ಗೊತ್ತಿಲ್ಲ. ಹೀಗಾಗಿ ಈ ರೀತಿಯ ಸಮಸ್ಯೆ ಆಗಬಾರದು ಅನ್ನೋ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗ್ತಿದೆ.

-masthmagaa.com

Contact Us for Advertisement

Leave a Reply