ಭಾರತವನ್ನು ಹಾಡಿ ಹೊಗಳಿದ ಅಂತರಾಷ್ಟ್ರೀಯ ಹಣಕಾಸು ನಿಧಿ!

masthmagaa.com:

ವಾಷಿಂಗ್ಟನ್: ಕೊರೋನಾ ವೈರಸ್ ಮತ್ತು ಅದರಿಂದಾದ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಭಾರತ ಅತ್ಯಂತ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಅಂತ ಐಎಂಎಫ್(ಅಂತರರಾಷ್ಟ್ರೀಯ ಹಣಕಾಸು ನಿಧಿ) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜೀವಾ ಹಾಡಿ ಹೊಗಳಿದ್ದಾರೆ. ಈ ವರ್ಷ ಆರ್ಥಿಕತೆಯ ಚೇತರಿಕೆಗೆ ಮತ್ತಷ್ಟು ಕ್ರಮಗಳನ್ನು ಭಾರತ ಕೈಗೊಳ್ಳಬೇಕಕು ಅಂತ ಕೂಡ ಮನವಿ ಮಾಡಿದ್ದಾರೆ.

ಜನವರಿ 26ರಂದು ವಿಶ್ವ ಆರ್ಥಿಕ ಬೆಳವಣಿಗೆ ಕುರಿತು ಐಎಂಎಫ್ ವರದಿ ಬಿಡುಗಡೆ ಮಾಡಲಿದೆ. ಈ ಬಗ್ಗೆ ಮಾತನಾಡಿದ ಅವರು, ಈ ವರದಿಯಲ್ಲಿ ಭಾರತದಲ್ಲಿ ಆರ್ಥಿಕತೆಯ ಮೇಲೆ ಕಡಿಮೆ ಪ್ರಮಾಣದ ದುಷ್ಪರಿಣಾಮ ಆಗಿರೋದನ್ನು ನೀವು ಕಾಣುತ್ತೀರಿ. ಯಾಕಂದ್ರೆ ಭಾರತ ಸಮಯಕ್ಕೆ ತಕ್ಕಂತೆ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ.. ಲಾಕ್​ಡೌನ್ ಹೇರಿದ್ರೂ ಕೂಡ ನಂತರದಲ್ಲಿ ಅದನ್ನು ಕೆಲವೊಂದು ಪ್ರದೇಶಗಳಿಗೆ ಸೀಮಿತಗೊಳಿಸಲಾಯ್ತು. ಇದಕ್ಕೆ ಜನಬೆಂಬಲವೂ ಸಿಕ್ಕಿದ್ದರಿಂದ ವರ್ಕೌಟ್ ಆಯ್ತು ಅಂತ ಅನ್ನಿಸುತ್ತೆ. ಯಾಕಂದ್ರೆ ಭಾರತದಲ್ಲಿ  ಗಮನಾರ್ಹವಾಗಿ ಆರ್ಥಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ ಅಂತ ಹೇಳಿದ್ಧಾರೆ.

ಹಣಕಾಸು ನೀತಿ ಮತ್ತು ಇತರೆ ವಿಷಯದಲ್ಲಿ ಭಾರತದ ಕ್ರಮಗಳು ಶ್ಲಾಘನೀಯ. ಭಾರತದ ಉದಯೋನ್ಮುಖ ಮಾರುಕಟ್ಟೆಗಳು ಜಿಡಿಪಿಯಲ್ಲಿ ಶೇ.6ರಷ್ಟು ಕೊಡುಗೆ ನೀಡಿವೆ. ಭಾರತದಲ್ಲಿ ಇನ್ನೂ ಹೆಚ್ಚಿನದನ್ನು ಮಾಡಲು ಸ್ಥಳವಿದೆ. ಸಾಧ್ಯವಾದರೆ ದಯವಿಟ್ಟು ಹೆಚ್ಚಿನದನ್ನು ಮಾಡಿ ಅಂತ ಹೇಳಿದ್ದಾರೆ.

-masthmagaa.com

 

 

 

 

Contact Us for Advertisement

Leave a Reply