masthmagaa.com:

ಇಷ್ಟುದಿನ ಗಡಿ ಮೂಲಕ ಉಗ್ರರನ್ನು ಭಾರತಕ್ಕೆ ಕಳಿಸುತ್ತಿದ್ದ ಪಾಪಿ ಪಾಕಿಸ್ತಾನ ಅದೇ ಉಗ್ರರಿಗೆ ಡ್ರೋನ್​ಗಳ ಮೂಲಕ ಶಸ್ತ್ರಾಸ್ತ್ರ ಕೂಡ ಪೂರೈಸುತ್ತಿದೆ ಅನ್ನೋ ವಿಚಾರವೀಗ ಬೆಳಕಿಗೆ ಬಂದಿದೆ. ಏನಾಗಿದೆ ಅಂದ್ರೆ, ಜಮ್ಮು-ಕಾಶ್ಮೀರದ ಅಖನೂರ್​ ಸೆಕ್ಟರ್​ನ ಗಡಿ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತುಂಬಿದ ಪ್ಯಾಕೆಟ್​ಗಳನ್ನು ಡ್ರೋನ್ ಮೂಲಕ ಬೀಳಿಸಲಾಗಿದೆ. ಇದು ನಮ್ಮ ಸೇನೆ ಮತ್ತು ಪೊಲೀಸರ ಕೈಗೆ ಸಿಕ್ಕಿದೆ. ಓಪನ್ ಮಾಡಿ ನೋಡಿದ್ರೆ ಅದರಲ್ಲಿ 2 AK-47 ರೈಫಲ್​​ಗಳು, 90 ಸುತ್ತು ಮದ್ದು ಗುಂಡುಗಳು, ಪಿಸ್ತೂಲ್ ಸೇರಿದಂತೆ ಭಾರಿ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ.

ಗಡಿಯಿಂದ 12 ಕಿ.ಮೀ. ದೂರದ ಅಖನೂರ್​ ಸೆಕ್ಟರ್​ನಲ್ಲಿ ಶಸ್ತ್ರಾಸ್ತ್ರ ತುಂಬಿದ ಇಂತಹ ಎರಡು ಪ್ಯಾಕೆಟ್​ಗಳು ಸಿಕ್ಕಿವೆ. ಇವುಗಳನ್ನ ಕಾಶ್ಮೀರ ಕಣಿವೆಯಲ್ಲಿರುವ ಉಗ್ರರಿಗೆ ತಲುಪಿಸಲೆಂದೇ ಡ್ರೋನ್​ಗಳ ಮೂಲಕ ಕಳಿಸಿಕೊಡಲಾಗಿತ್ತು ಅಂತ ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದರ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇರುವುದು ಬೆಳಕಿಗೆ ಬಂದಿದೆ.

 

-masthmagaa.com

Contact Us for Advertisement

Leave a Reply