ಭಾರತ-ತಾಲಿಬಾನ್‌ ನಿಯೋಗ ಭೇಟಿ: ಸಹಕಾರದ ಮಾತುಕತೆ!

masthmagaa.com:

ಆಫ್ಘನಿಸ್ಥಾನದ ತಾಲಿಬಾನ್‌ ಸರ್ಕಾರವನ್ನ ಭಾರತ ಇನ್ನೂ ಅಫಿಶಿಯಲ್ಲಾಗಿ ರೆಕಗ್ನೈಸ್‌ ಮಾಡಿಲ್ಲ. ಆದ್ರೂ ಈಗ ಭಾರತದ ಅಧಿಕಾರಿಗಳು ತಾಲಿಬಾನ್‌ ವಿದೇಶಾಂಗ ಸಚಿವರನ್ನ ಭೇಟಿ ಮಾಡಿದ್ದಾರೆ. ತಾಲಿಬಾನಿ ಸಚಿವ ಆಮಿರ್‌ ಖಾನ್‌ ಮುತ್ತಾಕಿ ಭಾರತಕ್ಕೆ ಬಂದಿದ್ರು. ಈ ವೇಳೆ ಪಾಕ್‌, ಆಫ್ಘನ್‌ ಹಾಗೂ ಇರಾನ್ ಜೊತೆಗಿನ ವ್ಯವಹಾರಗಳ ಉಸ್ತುವಾರಿ ವಹಿಸಿಕೊಂಡಿರೋ, ವಿದೇಶಾಂಗ ಇಲಾಖೆಯ ಜಾಯಿಂಟ್‌ ಸೆಕ್ರೆಟರಿ ಜೆಪಿ ಸಿಂಗ್‌ ನೇತೃತ್ವದ ತಂಡ ಆಮೀರ್‌ ಖಾನ್‌ರನ್ನ ಮೀಟ್‌ ಮಾಡಿದೆ. ಈ ಮೀಟಿಂಗ್‌ ಬಗ್ಗೆ ಮಾತನಾಡಿರೋ ಆಫ್ಘನ್‌ ವಿದೇಶಾಂಗ ಇಲಾಖೆ ವಕ್ತಾರ ಅಬ್ದುಲ್‌ ಖಹಾರ್‌ ಬಲ್ಕಿ, ʻಭಾರತ ಆಫ್ಘನಿಸ್ತಾನ್‌ ಸಂಬಂಧಗಳ ಬಗ್ಗೆ ಎರಡೂ ದೇಶಗಳು ಡೀಪಾಗಿ ಡಿಸ್ಕಶನ್‌ ಮಾಡಿವೆ. ಭಾರತ ಆಫ್ಘನಿಸ್ಥಾನಕ್ಕೆ ಕಳೆದ ಎರಡೂವರೆ ವರ್ಷಗಳಿಂದ ಹಲವು ಕ್ಷೇತ್ರಗಳಲ್ಲಿ ಮಾನವೀಯ ನೆರವು ನೀಡ್ತಿದೆ.. ಇಸ್ಲಾಮಿಕ್‌ ಎಮಿರೇಟ್‌ ಆಫ್‌ ಆಫ್ಘನಿಸ್ಥಾನ್‌ದ ಭದ್ರತೆ ಹಾಗೂ ಸ್ಥಿರತೆ ಕಾಪಾಡೋಕೆ ಭಾರತ ಎಫರ್ಟ್‌ ಹಾಕಿದೆ ಅಂತ ತಾಲಿಬಾನಿ ಸಚಿವ ಭಾರತದ ಗುಣಗಾನ ಮಾಡಿದ್ದಾರೆ. ಅಲ್ದೆ ʻʻಭಾರತ ನಮ್ಮನ್ನ ಹೊಗಳಿದೆ. ಮಾದಕ ವಸ್ತುಗಳ ವಿರುದ್ಧ, ಖೊರಾಸನ್‌ ಪ್ರಾಂತ್ಯದ IS ಉಗ್ರರ ವಿರುದ್ದ ಹಾಗೂ ಆಫ್ಘನ್‌ನ ಭ್ರಷ್ಟಾಚಾರದ ವಿರುದ್ಧ ತಾಲಿಬಾನ್‌ ಉತ್ತಮ ಹೋರಾಟ ನಡೆಸಿದೆ ಅಂತ ಭಾರತ ನಮ್ಮನ್ನ ಹೊಗಳಿದೆ ಅಂತʼ ಬಲ್ಕಿ ಹೇಳಿದ್ದಾರೆ. ಅಲ್ಲದೆ ಚಾಬಹರ್‌ ಬಂದರಿನ ಮೂಲಕ ಭಾರತ, ಆಫ್ಘನ್‌ಗಳ ವ್ಯಾಪಾರದ ಅಭಿವೃದ್ಧಿ ಹಾಗೂ ಒಟ್ಟಾರೆಯಾಗಿ ಆಫ್ಘನಿಸ್ಥಾನದ ಜೊತೆ ರಾಜಕೀಯ ಹಾಗೂ ಆರ್ಥಿಕ ಸಹಕಾರವನ್ನ ವಿಸ್ತರಿಸೋಕೆ ಭಾರತ ಉತ್ಸುಕವಾಗಿದೆ ಅಂತ ಸಿಂಗ್‌ ಹೇಳಿರೋದಾಗಿ ಈ ತಾಲಿಬಾನ್‌ ಅಧಿಕಾರಿ ಹೇಳಿದ್ದಾರೆ. ಅಲ್ಲದೆ ಸಚಿವ ಮುತ್ತಾಕಿ ಆಫ್ಘನ್‌ ವ್ಯಾಪಾರಿಗಳು, ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಭಾರತದ ವೀಸಾ ಸಿಗುವಂತೆ ಮಾಡಿ ಅಂತ ಕೇಳಿಕೊಂಡಿದ್ದಾರೆ. ಉಭಯ ದೇಶಗಳು ವ್ಯಾಪಾರದ ವಿಚಾರವಾಗಿ ಸಹಕಾರ ಜಾಸ್ತಿ ಮಾಡ್ಕೊಳ್ಳೋ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ ಅಂತ ಗೊತ್ತಾಗಿದೆ. ಇನ್ನು ಇತ್ತೀಚಿಗಷ್ಟೇ ಭಾರತದಲ್ಲಿ ಆಫ್ಘನ್‌ ವಿದೇಶಾಂಗ ಇಲಾಖೆ ಕಚೇರಿಯನ್ನ ಮುಚ್ಚಲಾಗಿತ್ತು. ಇದ್ರ ಬೆನ್ನಲ್ಲೇ ಇಂತಹ ಬೆಳವಣಿಗೆಯಾಗಿರೋದು ಬಹಳ ಇಂಟ್ರಸ್ಟಿಂಗ್‌ ಅನ್ನಿಸ್ತಾ ಇದೆ.

-masthmagaa.com

Contact Us for Advertisement

Leave a Reply