masthmagaa.com:

ಯುನೈಟೆಡ್ ಅರಬ್ ಎಮಿರೇಟ್ಸ್​ನ ಶಾರ್ಜಾದಿಂದ ಉತ್ತರಪ್ರದೇಶದ ಲಖ್ನೌಗೆ ಹಾರಾಟ ನಡೆಸಿದ್ದ ಇಂಡಿಗೋ ವಿಮಾನವನ್ನ ಪಾಕಿಸ್ತಾನದ ಕರಾಚಿ ಏರ್​ಪೋರ್ಟ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಘಟನೆ ನಡೆದಿದೆ. ಅಂದ್ಹಾಗೆ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ದಿಢೀರ್ ಅಂತ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ವಿಮಾನವನ್ನ ಪಾಕಿಸ್ತಾನಕ್ಕೆ ಡೈವರ್ಟ್ ಮಾಡಿ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯ್ತು. ಆದ್ರೆ ಅಷ್ಟರಲ್ಲಾಗಲೇ ಪ್ರಯಾಣಿಕನ ಉಸಿರು ನಿಂತು ಹೋಗಿತ್ತು. ಆತ ಮೃತಪಟ್ಟಿದ್ದಾನೆ ಅಂತ ಏರ್​ಪೋರ್ಟ್​ನ​ ಮೆಡಿಕಲ್ ಟೀಂ ಘೋಷಿಸಿತು. ಆತನ ಕುಟುಂಬಕ್ಕೆ ಇಂಡಿಗೋ ಸಂಸ್ಥೆ ಸಂತಾಪ ಸೂಚಿಸಿದೆ.

-masthmagaa.com

Contact Us for Advertisement

Leave a Reply