ಅಮೆರಿಕಾದ ಈ ನಟಿಯ ಅಫೇರ್​​ನಲ್ಲಿ ಸೌದಿ ರಾಜಕುಮಾರ..!?

ಸೌದಿ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಮತ್ತು ಅಮೆರಿಕಾದ ನಟಿ ಲಿಂಡ್ಸೆ ಲೋಹಾನ್ ನಡುವಿನ ಅಫೇರ್ ಬಗ್ಗೆ ಚರ್ಚೆ ಜೋರಾಗಿದೆ. ಆಂಗ್ಲ ಪತ್ರಿಕೆಯೊಂದು ಇವರಿಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗುತ್ತಿದೆ ಅಂತ ವರದಿ ಮಾಡಿತ್ತು. ಮೂಲಗಳ ಪ್ರಕಾರ ಮೊಹ್ಮದ್ ಬಿನ್ ಸಲ್ಮಾನ್ ತನ್ನ ಪ್ರೈವೇಟ್ ಜೆಟ್​​​​​ನಲ್ಲಿ ಲಿಂಡ್ಸೆ ಲೋಹಾನ್ ಭೇಟಿಗೆ ತೆರಳುತ್ತಾರೆ. ಜೊತೆಗೆ ಅವರಿಗೆ ದುಬಾರಿ ಗಿಫ್ಟ್​ಗಳನ್ನು ನೀಡುತ್ತಾರೆ. ಅದ್ರಲ್ಲೂ ಇತ್ತೀಚೆಗೆ ಕ್ರೆಡಿಟ್ ಕಾರ್ಡನ್ನೇ ಗಿಫ್ಟಾಗಿ ಕೊಟ್ಟು ಬಂದಿದ್ದಾಎಂದು ಮೂಲಗಳು ತಿಳಿಸಿವೆ.

ಆದ್ರೆ ಲೋಹಾನ್ ಆಪ್ತ ಸಹಾಯಕ ಈ ವರದಿಯನ್ನು ನಿರಾಕರಿಸಿದ್ದಾರೆ. ಅಲ್ಲದೆ ಈವರೆಗೆ ಮೊಹ್ಮದ್ ಬಿನ್ ಸಲ್ಮಾನ್ ಮತ್ತು ಲಿಂಡ್ಸೆ ಲೋಹಾನ್​​ ಒಮ್ಮೆ ಮಾತ್ರ ಭೇಟಿಯಾಗಿದ್ದಾರೆ. ಒಂದು ವರ್ಷ ಮುಂಚೆ ಫಾರ್ಮುಲಾ ವನ್ ಗ್ರ್ಯಾಂಡ್​​ ಪ್ರಿಕ್ಸ್​ ರೇಸ್​ ವೇಳೆ ಈ ಭೇಟಿ ನಡೆದಿತ್ತು ಅಂತ ಹೇಳಿದ್ದಾರೆ. ಅಲ್ಲದೆ ಕ್ರೆಡಿಟ್ ಕಾರ್ಡ್​ ಕೊಟ್ಟರು, ಪ್ರೈವೇಟ್ ಜೆಟ್​​ನಲ್ಲಿ ಭೇಟಿಗೆ ಬರುತ್ತಾರೆ ಅನ್ನೊದೆಲ್ಲಾ ಸುಳ್ಳು ಎಂದು ಕಿಡಿಕಾರಿದ್ದಾರೆ.

ಲಿಂಡ್ಸೆ ತಂದೆ ಮೈಕೇಲ್ ಕೂಡ ಪ್ರತಿಕ್ರಿಯಿಸಿ, ಮೊಹ್ಮದ್ ಬಿನ್ ಸಲ್ಮಾನ್ ಮತ್ತು ನನ್ನ ಮಗಳು ಲಿಂಡ್ಸೆ ನಡುವೆ ಸ್ನೇಹ ಇರಬಹುದು. ಅದನ್ನು ಬಿಟ್ಟು ಯಾವುದೇ ರೀತಿಯ ಸಂಬಂಧ ಇರೋದು ಸುಳ್ಳು ಎಂದು ಹೇಳಿದ್ದಾರೆ.

Contact Us for Advertisement

Leave a Reply