ಜಮ್ಮು ಕಾಶ್ಮೀರದಲ್ಲಿ ಸೇನಾ ಜಮಾವಣೆ ಹೆಚ್ಚಳ!

masthmagaa.com:

ಜಮ್ಮು ಕಾಶ್ಮೀರದಲ್ಲಿ ಯೋಧರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಅದ್ರಲ್ಲೂ ಉತ್ತರ ಕಾಶ್ಮೀರ ಮತ್ತು ಜಮ್ಮುವಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ಯಾರಾ ಮಿಲಿಟರಿ ಯೋಧರನ್ನು ನಿಯೋಜಿಸಲಾಗಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು, ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತಲ್ವಾ…ಆಗ ಇಷ್ಟು ಪ್ರಮಾಣದಲ್ಲಿ ಯೋಧರನ್ನು ನಿಯೋಜಿಸಲಾಗಿತ್ತು. ಅದು ಬಿಟ್ರೆ ಇಷ್ಟೊಂದು ಯೋಧರನ್ನು ನಿಯೋಜಿಸಿರೋದು ಇದೇ ಮೊದಲು. ಇದ್ರಿಂದ ಸ್ಥಳೀಯ ನಾಯಕರು ಸೇನಾ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ರೆಈ ಬಗ್ಗೆ ಪ್ರತಿಕ್ರಿಯಿಸಿರೋ ಅಧಿಕಾರಿಗಳು, ಸೇನೆ ಹೆಚ್ಚಿಸಿದ ಕೂಡಲೇ ಏನೋ ದೊಡ್ಡದು ಆಗ್ಬಿಡುತ್ತೆ ಅಂತ ರೂಮರ್ಸ್ ಹಬ್ಬಿಸಲಾಗ್ತಿದೆ. ಇತ್ತೀಚೆಗೆ ಚುನಾವಣೆ ಹಿನ್ನೆಲೆ ಬೇರೆ ಬೇರೆ ರಾಜ್ಯಗಳಿಗೆ ಹೋಗಿದ್ದ ಯೋಧರು ವಾಪಸ್ ಜಮ್ಮು ಕಾಶ್ಮೀರಕ್ಕೆ ನಿಯೋಜನೆಗೊಂಡಿದ್ಧಾರೆ ಅಷ್ಟೆ ಅಂತ ಸ್ಪಷ್ಟನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply