ಇಸ್ರೇಲ್-ಗಾಜಾ ಸಂಘರ್ಷಕ್ಕೆ ಒಟ್ಟು 116 ಬಲಿ!

masthmagaa.com:

ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಿನ ಸಂಘರ್ಷ ಹತತ್ರ ಒಂದು ವಾರವಾದ್ರೂ ನಿಲ್ಲೋ ಲಕ್ಷಣವೇ ಕಾಣ್ತಾ ಇಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಸೀರಿಯಸ್ ಆಗ್ತಾನೇ ಹೋಗ್ತಾ ಇದೆ. ಎರಡೂ ದೇಶಗಳ ನಡುವೆ ರಾಕೆಟ್ ದಾಳಿ, ಏರ್​​​ಸ್ಟ್ರೈಕ್ ನಡೀತಾನೇ ಇದೆ. ಗಾಜಾ ಪಟ್ಟಿ ಕಡೆ ನಿನ್ನೆ ಒಂದೇ ದಿನ 52 ಮಂದಿ ಸಾವನ್ನಪ್ಪಿದ್ದು, ಈವರೆಗೆ 109 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 29 ಮಂದಿ ಮಕ್ಕಳು ಕೂಡ ಸೇರಿದ್ದಾರೆ. ಇನ್ನು ಇಸ್ರೇಲ್ ಕಡೆನೂ ಒಟ್ಟು 7 ಜನ ಸಾವನ್ನಪ್ಪಿದ್ಧಾರೆ. ಗಾಜಾ ಪಟ್ಟಿ ಕಡೆಯಿಂದ ಹಮಾಸ್ ಪಡೆ ರಾಕೆಟ್ ದಾಳಿ ನಡೆಸ್ತಾ ಇದ್ರೆ, ಇಸ್ರೇಲ್ ಏರ್​ಸ್ಟ್ರೈಕ್ ಜಾಸ್ತಿ ಮಾಡಿದೆ. ಅದೇ ರೀತಿ ಭೂಸೇನೆ ಹಮಾಸ್ ಪಡೆಯ ಕಟ್ಟಡಗಳ ಮೇಲೆ ದಾಳಿ ನಡೆಸ್ತಾ ಇದೆ. ಅಂದ್ರೆ ಗಾಜಾ ಪಟ್ಟಿಯೊಳಗೆ ನುಗ್ಗಿಲ್ಲ.. ಬದಲಾಗಿ ಗಡಿಯಲ್ಲೇ ನಿಂತರು ಫಿರಂಗಿ ಮೂಲಕ ದಾಳಿ ನಡೆಸ್ತಿರೋದಾಗಿ ಇಸ್ರೇಲ್ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇದು ಸದ್ಯಕ್ಕೆ ನಿಲ್ಲೋದಿಲ್ಲ ಅಂತ ಹೇಳಿದ್ದಾರೆ. ಅದೇ ರೀತಿ ಸೇನಾಧಿಕಾರಿಗಳು ಕೂಡ, ಹಮಾಸ್ ಒಂದು ಶಕ್ತಿಶಾಲಿ ಭಯೋತ್ಪಾದಕ ಪಡೆ.. ಹೀಗಾಗಿ ಕದನ ವಿರಾಮ ಘೋಷಣೆಗೂ ಮುನ್ನ ದೊಡ್ಡ ಹೊಡೆತ ನೀಡಬೇಕು.. ಈವರೆಗೂ ಗಾಜಾಪಟ್ಟಿಯಿಂದ ಇಸ್ರೇಲ್ ಕಡೆಗೆ 1750 ರಾಕೆಟ್​​​ಗಳು ಹಾರಿದ್ದು, ಅವುಗಳ ಪೈಕಿ 300 ಗಾಜಾ ಪಟ್ಟಿ ಗಡಿಯಲ್ಲೇ ಬಿದ್ದಿದೆ ಅಂತ ಹೇಳಿದ್ದಾರೆ. ಇನ್ನು ನಿನ್ನೆಯಷ್ಟೇ ಇಸ್ರೇಲ್ ಅಧ್ಯಕ್ಷ ದೇಶದಲ್ಲಿ ಅರಬ್ ಇಸ್ರೇಲಿಗರು ಮತ್ತು ಯಹೂದಿಗಳ ನಡುವೆ ನಾಗರಿಕ ಯುದ್ಧವೇ ನಡೀಬೋದು ಅಂತ ಎಚ್ಚರಿಸಿದ್ರು. ಅದ್ರ ಬೆನ್ನಲ್ಲೇ ಈಗ ದೇಶದಲ್ಲಿ ಹಲವು ಪ್ರದೇಶಗಳ ಬೀದಿ ಬೀದಿಗಳಲ್ಲಿ ಗಲಾಟೆ ಶುರುವಾಗಿದೆ. ಇನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಭಾನುವಾರ ಓಪನ್ ಮೀಟಿಂಗ್ ಮಾಡಿ, ಈ ಬಗ್ಗೆ ಬಹಿರಂಗ ಚರ್ಚೆ ನಡೆಸಲಿದೆ.

-masthmagaa.com

Contact Us for Advertisement

Leave a Reply