ಮೋದಿ ಸಮಾವೇಶದಲ್ಲಿ ದಾದಾ ಸೌರವ್ ಗಂಗೂಲಿ?

masthmagaa.com:

ಕೋಲ್ಕತ್ತ: ಮಾರ್ಚ್​ 7ರಂದು ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ. ಈ ಸಮಾವೇಶಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಭಾಗಿಯಾಗಲಿದ್ದಾರೆ ಅಂತ ಹೇಳಲಾಗ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಸೌರವ್ ಗಂಗೂಲಿ ಆರೋಗ್ಯ ಸರಿಯಾಗಿದ್ದರೆ, ವಾತಾವರಣ ಸರಿಹೊಂದುವಂತಿದ್ದರೆ ಬರಬಹುದು.. ಅವರು ಬಂದ್ರೆ ನಮಗೂ ಖುಷಿಯಾಗುತ್ತೆ.. ಅವರಿಗೂ ಖುಷಿಯಾಗುತ್ತೆ.. ಸಮಾವೇಶಕ್ಕೆ ಬರೋ ಜನರಿಗೂ ಖುಷಿಯಾಗುತ್ತೆ. ಹೀಗಾಗಿ ಅವರು ಬಂದರೆ ನಾವು ಸ್ವಾಗತಿಸುತ್ತೇವೆ..  ಆದ್ರೆ ಬರೋದು ಬಿಡೋದು ಅವರಿಗೆ ಬಿಟ್ಟಿದ್ದು ಅಂತ ಹೇಳಿದೆ.

ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೌರವ್ ಗಂಗೂಲಿ ಜನವರಿ 31ರಂದು ಡಿಸ್ಚಾರ್ಜ್ ಆಗಿದ್ರು. ಅವರಿಗೆ ಎರಡೆರಡು ಬಾರಿ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಸದ್ಯ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಈ ನಡುವೆಯೇ ಅವರು ವಿಧಾನಸಭೆ ಚುನಾವಣೆ ಹೊತ್ತಲ್ಲೇ ರಾಜಕೀಯ ಸೇರಲಿದ್ದಾರೆ ಅನ್ನೋ ಊಹಾಪೋಹಗಳು ಕೂಡ ಹರಿದಾಡ್ತಿವೆ. ಸೌರವ್ ಗಂಗೂಲಿಯವರು ಪಶ್ಚಿಮ ಬಂಗಾಳದವರೇ ಆಗಿದ್ದು, ಅಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

-masthmagaa.com

Contact Us for Advertisement

Leave a Reply