‘ಅಕ್ಕಿ ಕೊಟ್ಟರೆ ಬಡವರು ಸೋಮಾರಿಗಳಾಗುತ್ತಾರೆ ಅನ್ನೋದು ತಪ್ಪು’: ಡಾಲಿ ಧನಂಜಯ್!

masthmagaa.com:

ನಟ ಧನಂಜಯ್‌ ಸಾಮಾನ್ಯವಾಗಿ ಯಾವುದೇ ವಿವಾದಗಳಿಗೂ ಮಾತಾಡೋದಿಲ್ಲ. ತಾವಾಯ್ತು ತಮ್ಮ ಸಿನಿಮಾ ಆಯ್ತು, ಅಂತ ಇರೋಕೆ ಜಾಸ್ತಿ ಇಷ್ಟ ಪಡ್ತಾರೆ. ಇಂದು ಶಾಲೆಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ ಧನಂಜಯ್‌ ಸರ್ಕಾರ 10ಕೆಜಿ ಅಕ್ಕಿ ಕೊಡ್ತೀವಿ ಎಂದ ವಿಷಯಕ್ಕೆ ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತದಿಂದ ಗೆದ್ದು ಬಂದಿದೆ. ತಾವು ಗೆದ್ದು ಬಂದ್ರೆ ಪ್ರತಿ ಮನೆಯ ಒಬ್ಬೊಬ್ಬರಿಗೆ 10ಕೆಜಿ ಅಕ್ಕಿ ಕೊಡೋದಾಗಿ ಆಶ್ವಾಸನೆ ನೀಡಿತ್ತು. ಜೊತೆಗೆ ನಿರುದ್ಯೋಗಿಗಳಿಗೆ 3000, ಮನೆಯ ಒಡತಿಗೆ 2000 ಕೊಡೋದಾಗಿ ಹೇಳಿತ್ತು. ಈ ವೇಳೆ ರಾಜ್ಯ ಸರ್ಕಾರದಿಂದ ಉಚಿತವಾಗಿ 10 ಕೆಜಿ ಅಕ್ಕಿ ನೀಡುವ ವಿಚಾರದ ಬಗ್ಗೆ ಧನಂಜಯ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಯಾವುದೇ ಪಕ್ಷದ ಪರವಾಗಿ ಅಥವಾ ವಿರೋಧವಾಗಿ ನಾನು ಮಾತನಾಡುವುದಿಲ್ಲ. ಸಾಮಾನ್ಯ ಮನುಷ್ಯನಾಗಿ ನಾನು‌ ಹೇಳ್ತೀನಿ. ಹಸಿವು ನೀಗಿಸಲು ಉಚಿತವಾಗಿ ಅಕ್ಕಿ ಕೊಟ್ಟರೆ ತಪ್ಪಾಗಿ ಕಾಣಲ್ಲ. ಅಕ್ಕಿ ಕೊಟ್ಟರೆ ಜನರು ಸೋಮಾರಿ ಆಗ್ತಾರೆ ಅನ್ನೋದು ತಪ್ಪು. ಅಕ್ಕಿ ಕೊಟ್ಟರೆ ಹಸಿವು ನೀಗುತ್ತದೆ. ಇತರೆ ಖರ್ಚಿಗೆ ಬಡವರು ದುಡಿಯುತ್ತಾರೆ. ಬಡವರಿಗೆ ಅಕ್ಕಿ ಕೊಟ್ಟರೆ ಸೋಮಾರಿ ಆಗ್ತಾರೆ ಅನ್ನೋದು ತಪ್ಪು’ ಎಂದು ಧನಂಜಯ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply