ಪಾಲೆಸ್ತೀನಿಯರಿಗೆ ತಮ್ಮ ಮಾತೃಭೂಮಿ ನಿರಾಕರಣೆ ಮಾಡಲಾಗಿದೆ: ಭಾರತ

masthmagaa.com:

ಇಸ್ರೇಲ್‌ ಹಮಾಸ್‌ ಯುದ್ದದ ಕುರಿತಂತೆ ಭಾರತ ಮಹತ್ವದ ಹೇಳಿಕೆ ಕೊಟ್ಟಿದೆ. ಪಾಲೇಸ್ತೇನಿಯರಿಗೆ ಅವರ ಜಾಗವನ್ನ ನಿರಾಕರಣೆ ಮಾಡಲಾಗಿದೆ ಅಂತ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಹೇಳಿದ್ದಾರೆ. ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಾಗತಿಕ ಸಂಘರ್ಷಗಳಲ್ಲಿ ಭಾರತದ ನಿಲುವಿನ ಬಗ್ಗೆ ಜೈಶಂಕರ್‌ ಮಾತಾಡ್ತಾ ಇದ್ರು. ಈ ವೇಳೆ ಅಕ್ಬೋಬರ್‌ 7ರ ಘಟನೆ ಅಂದ್ರೆ ಇಸ್ರೇಲ್‌ ಮೇಲೆ ಹಮಾಸ್‌ ಮಾಡಿದ ದಾಳಿ ಉಗ್ರಕೃತ್ಯ ಹೌದು. ಆದ್ರೆ ಇನ್ನೊಂದು ಕಡೆ ನಾಗರಿಕರ ಸಾವನ್ನ ಪರಿಗಣನೆಗೆ ತೆಗೆದುಕೊಳ್ಳಲಾಗ್ತಿಲ್ಲ. ದೇಶಗಳು ʻರೆಸ್ಪಾಂಡ್‌ ಮಾಡುವಾಗʼ ತಮಗೆ ಬೇಕಾದ ಸಮರ್ಥನೆಗಳನ್ನ ಕೊಟ್ಟುಕೊಳ್ಳಬೋದು. ಆದ್ರೆ ಆ ರೀತಿ ʻಪ್ರತಿಕ್ರಿಯೆʼ ಕೊಡೋಕೆ ಸಾಧ್ಯವಿಲ್ಲ. ಪ್ರತಿಯೊಂದು ʻಪ್ರತಿಕ್ರಿಯೆʼಯಲ್ಲೂ ಅಂತರಾಷ್ಟೀಯ ಕಾನೂನು ಮತ್ತು ಮಾನವೀಯ ಮೌಲ್ಯಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು. ಈ ಸಮಸ್ಯೆಯಲ್ಲಿ ಅಂದ್ರೆ ಇಸ್ರೇಲ್‌ ಹಮಾಸ್‌ ಸಂಘರ್ಷದಲ್ಲಿ ಏನೇ ತಪ್ಪು ಸರಿ ಇರಬೋದು. ಆದರೆ ಫ್ಯಾಕ್ಟ್‌ ಏನಂದ್ರೆ ಪಾಲೇಸ್ತೇನಿಯರ ಹಕ್ಕುಗಳು ಮತ್ತು ಅವರ ಹೋಮ್‌ ಲ್ಯಾಂಡನ್ನ ನಿರಾಕರಣೆ ಮಾಡಲಾಗಿದೆ ಅಂತ ಇಸ್ರೇಲ್‌ ವಿರುದ್ದ ಭಾರತ ಪರೋಕ್ಷವಾಗಿ ಕಿಡಿಕಾರಿದೆ. ಇನ್ನು ರಷ್ಯಾ ಯುಕ್ರೇನ್‌ ಸಂಘರ್ಷದ ಬಗ್ಗೆ ಕೂಡ ಜೈಶಂಕರ್‌ ಮಾತಾಡಿದ್ರು. ನಾವು ಯುಕ್ರೇನ್‌ ಸಂಘರ್ಷ ಆರಂಭವಾದಾಗಿನಿಂದ ಇದನ್ನೇ ಹೇಳ್ತಾ ಬಂದಿದ್ದೀವಿ. ಈ ಸಮಸ್ಯೆಗೆ ಪರಿಹಾರ ಯುದ್ದಭೂಮಿಯಲ್ಲಿ ಸಿಗಲ್ಲ. ನಮ್ಮ ನಿಲುವು ಅಂದಿನಿಂದ ಇಂದಿನ ತನಕ ಒಂದೇ ಥರ ಇದೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply