ಲೋಕಲ್ ಹುಡ್ಗನ್ನ ಮದ್ವೆಯಾಗಿ ರಾಯಲ್ ಫ್ಯಾಮಿಲಿ ಬಿಟ್ಟ ಜಪಾನ್ ರಾಜಕುಮಾರಿ!

masthmagaa.com:

ಜಪಾನ್​​ ರಾಜಕುಮಾರಿ ಮಾಕೋ ಕೊನೆಗೂ ತನ್ನ ಕಾಲೇಜ್ ಕ್ಲಾಸ್​​ಮೇಟ್​​ ಕೇ ಕೊಮುರೋ ಅವರನ್ನು ಮದ್ವೆಯಾಗಿದ್ಧಾರೆ. ಈ ಮೂಲಕ ಜಪಾನ್ ರಾಯಲ್ ಫ್ಯಾಮಿಲಿಯಿಂದ ಕಂಪ್ಲೀಟಾಗಿ ಹೊರನಡೆದಿದ್ದಾರೆ. ಜಪಾನ್ ಸಾಮ್ರಾಟ ಅಕಿಹಿಟೋ ಮೊಮ್ಮಗಳಾದ ಮಾಕೋ ಕಾಲೇಜ್ ಕ್ಲಾಸ್​ಮೇಟ್ ಒಬ್ಬರನ್ನು ಪ್ರೀತಿಸ್ತಿದ್ರು. 2017ರಲ್ಲಿ ಎಂಗೇಜ್ಮೆಂಟ್ ಕೂಡ ಆಗಿದ್ರು. ಆರಂಭದಲ್ಲಿ ಎಲ್ಲರೂ ಖುಷಿ ಪಟ್ರೂ ಕೂಡ, ಕುಮುರೋ ತಾಯಿ ವಿರುದ್ಧದ ದುಡ್ಡಿಗೆ ಸಂಬಂಧಿಸಿದ ಹಗರಣದ ಬಗ್ಗೆ ಪತ್ರಿಕೆಗಳು ವರದಿ ಮಾಡಿದ್ವು. ಇದಾದ ಬಳಿಕ ಪರಿಸ್ಥಿತಿ ಬಿಗಡಾಯಿಸಿತು. ಮದುವೆಯನ್ನು ಮುಂದೂಡಲಾಯ್ತು. ಇದಾದ ಬಳಿಕ 2018ರಲ್ಲಿ ಕುಮುರೋ ಕಾನೂನು ಪದವಿಗಾಗಿ ಸೀದಾ ನ್ಯೂಯಾರ್ಕ್​​​ಗೆ ಹೋಗಿದ್ರು. ಕಳೆದ ಸೆಪ್ಟೆಂಬರ್​​ನಲ್ಲಷ್ಟೇ ಅವರು ಜಪಾನ್​​ಗೆ ವಾಪಸ್ಸಾಗಿದ್ರು. ಅಂದಹಾಗೆ ಜಪಾನ್​​ನಲ್ಲಿ ರಾಜಕುಮಾರರಿಗೆ ಉತ್ತರಾಧಿಕಾರ ಇರುತ್ತೆ. ಆದ್ರೆ ರಾಜಕುಮಾರಿಯರಿಗೆ ಉತ್ತರಾಧಿಕಾರ ಇರಲ್ಲ. ಜಸ್ಟ್ ಒಂದಷ್ಟು ದುಡ್ಡು ನೀಡಲಾಗುತ್ತೆ. ಆದ್ರೆ ವಿರೋಧ ವ್ಯಕ್ತವಾಗಿದ್ದರಿಂದ ರಾಜಕುಮಾರಿ ಮಾಕೋ 10 ಲಕ್ಷ ಡಾಲರ್ ದುಡ್ಡು ಪಡೆಯೋಕೂ ನಿರಾಕರಿಸಿದ್ರು. ಅದ್ರ ಬೆನ್ನಲ್ಲೇ ಜಪಾನ್ ರಾಯಲ್ ಫ್ಯಾಮಿಲಿ ತೊರೆಯಲು ಸರ್ಕಾರ ಒಪ್ಪಿಗೆ ನೀಡಿತ್ತು. ಅದ್ರ ಬೆನ್ನಲ್ಲೇ ಈಗ ಮದುವೆಯಾಗಿರೋ ಜೋಡಿ, ಅಮೆರಿಕಗೆ ಹೋಗಿ ನೆಲೆಸೋ ಪ್ಲಾನ್ ಮಾಡ್ಕೊಂಡಿದೆ.

-masthmagaa.com

Contact Us for Advertisement

Leave a Reply