ಜೋರ್ಡಾನ್​ ರಾಜನ ವಿರುದ್ಧ ಸೌದಿಯಿಂದ ಮಸಲತ್ತು?

masthmagaa.com:

ಜೋರ್ಡಾನ್ ಪ್ರಿನ್ಸ್​​​ ಹಮ್ಜಾ ಸೌದಿ ಅರೇಬಿಯಾದ ಬೆಂಬಲದೊಂದಿಗೆ ರಾಜ 2 ಅಬ್ದುಲ್ಲಾರನ್ನು ಕೆಳಗಿಳಿಸೋ ಪ್ಲಾನ್ ಮಾಡಿದ್ರು ಅನ್ನೋ ವಿಚಾರ ಬಹಿರಂಗವಾಗಿದೆ. ಹಮ್ಜಾನ ಇಬ್ಬರು ಬೆಂಬಲಿಗರ ವಿರುದ್ಧ ಕೋರ್ಟ್​​ಗೆ ಸಲ್ಲಿಸಿರೋ ಆರೋಪ ಪಟ್ಟಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರು ಸೌದಿ ರಾಯಲ್ ಕೋರ್ಟ್​​​ನ ಮಾಜಿ ಮುಖ್ಯಸ್ಥ ಬಸೀಂ ಅವದಲ್ಲಾ, ಮತ್ತೊಬ್ಬರು ಜೋರ್ಡಾನ್​​ನ ವಿಶೇಷ ರಾಯಭಾರಿಯಾಗಿದ್ದ ಶರೀಫ್ ಹಸನ್ ಬಿನ್ ಝೈದ್​​​. ಪ್ರಿನ್ಸ್​ ಹಮ್ಜಾಗೆ ಆಪ್ತರಾಗಿದ್ದ ಇವರಿಬ್ಬರೂ ಸೌದಿ ಅರೇಬಿಯಾದ ಜೊತೆ ನಿಕಟ ಸಂಪರ್ಕ ಹೊಂದಿದ್ರು. ಅದ್ರಲ್ಲೂ ಬಸ್ಸೀಂ ಅವದುಲ್ಲಾ ಸೌದಿ ಪೌರತ್ವ ಕೂಡ ಹೊಂದಿದ್ರು ಅಂತ ಗೊತ್ತಾಗಿದೆ. ಅಂದಹಾಗೆ ಏಪ್ರಿಲ್ ತಿಂಗಳಾರಂಭದಲ್ಲಿ ಜೋರ್ಡಾನ್​ ರಾಜ 2ನೇ ಅಬ್ದುಲ್ಲಾರನ್ನು ಕೆಳಗಿಳಿಸಲು ಹಮ್ಜಾ ಸಂಚು ಹೂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಇದಕ್ಕಾಗಿ ಹಮ್ಜಾರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿತ್ತು. ನಂತರದಲ್ಲಿ ಈ ವಿಚಾರವನ್ನು ತಮ್ಮ ಪರಿವಾರದಲ್ಲೇ ಸರಿಪಡಿಸಿಕೊಳ್ಳೋದಾಗಿಯೂ ಕಿಂಗ್ ಅಬ್ದುಲ್ಲಾ ಸೆಕೆಂಡ್​​ ಘೋಷಿಸಿದ್ರು. ಅದೇ ರೀತಿ ಅವರ ಇಬ್ಬರು ಬೆಂಬಲಿಗರನ್ನು ಅರೆಸ್ಟ್ ಮಾಡಿ, ರಾಜದ್ರೋಹ ಮತ್ತು ಪ್ರಚೋದನೆ ನೀಡಿದ ಆರೋಪದ ಅಡಿ ಕೇಸ್ ದಾಖಲಿಸಲಾಗಿತ್ತು. ಇದೇ ತಿಂಗಳಾಂತ್ಯದಲ್ಲಿ ಇಬ್ಬರನ್ನೂ ಸ್ಟೇಟ್​ ಸೆಕ್ಯೂರಿಟಿ ಕೋರ್ಟ್​ ವಿಚಾರಣೆಗೆ ಒಳಪಡಿಸಲಿದ್ದು, ಒಂದ್ವೇಳೆ ಆರೋಪ ಸಾಬೀತಾದ್ರೆ 20 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತೆ. ಅಂದಹಾಗೆ ಪ್ರಿನ್ಸ್​ ಹಮ್ಜಾ ಜೋರ್ಡಾನ್ ರಾಜ 2ನೇ ಅಬ್ದುಲ್ಲಾರ ಮಲಸಹೋದರ.. 2004ರಲ್ಲಿ ಹಮ್ಜಾರನ್ನು ವಾಲಿ ಅಹದ್ ಅಂದ್ರೆ ಅಂದ್ರೆ ಉತ್ತರಾಧಿಕಾರಿ ಸ್ಥಾನದಿಂದ ತೆಗೆದು ಹಾಕಿ, ಆ ಸ್ಥಾನವನ್ನು ತಮ್ಮ ಮಗನಿಗೆ ನೀಡಿದ್ರು.

-masthmagaa.com

Contact Us for Advertisement

Leave a Reply