ಚೆನ್ನೈ ಪೊಲೀಸರಿಂದ ನಟ ಕಮಲ್ ಹಾಸನ್ ವಿಚಾರಣೆ ..!

ತಮಿಳುನಾಡು: ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಚೆನ್ನೈ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ್ದಾರೆ. ಈ ಹಿಂದೆ ಸಿನಿಮಾ ಸೆಟ್​​ನಲ್ಲಿ ಕ್ರೇನ್ ಬಿದ್ದು ಮೂವರು ಸಹ ನಿರ್ದೇಶಕರು ಸಾವನ್ನಪ್ಪಿದ್ದರು. ಅಲ್ಲದೆ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಕಮಲ್ ಹಾಸನ್​​ರನ್ನು ವಿಚಾರಣೆ ನಡೆಸಿದ್ದಾರೆ. ಕಮಲ್ ಹಾಸನ್ ನಟನೆಯ ಇಂಡಿಯನ್-2 ಸಿನಿಮಾ ಶೂಟಿಂಗ್ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಆದ್ರೆ ಘಟನೆ ನಡೆದ ಸಮಯದಲ್ಲಿ ಕಮಲ್ ಹಾಸನ್ ಸಿನಿಮಾ ಸೆಟ್​ನಲ್ಲಿ ಇರಲಿಲ್ಲ. ಕಳೆದ ವಾರ ನಿರ್ದೇಶಕ ಶಂಕರ್ ಅವರನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದರು.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ದುರ್ಘಟನೆಗೆ ನಿರ್ಲಕ್ಷ್ಯವೇ ಕಾರಣ ಅಂತ ಹೇಳಿದ್ದಾರೆ. ಅಲ್ಲದೆ ಘಟನೆಗೆ  ಯಾರು ಹೊಣೆ ಅನ್ನೋದನ್ನ ಮರಣೋತ್ತರ ಪರೀಕ್ಷೆ ಬಂದ ಬಳಿಕ ನಿರ್ಧರಿಸುತ್ತೇವೆ ಅಂತ ಪೊಲೀಸರು ತಿಳಿಸಿದ್ದಾರೆ.

Contact Us for Advertisement

Leave a Reply