ಬೈ ಎಲೆಕ್ಷನ್​​ನಲ್ಲಿ ಬಿಜೆಪಿಗೊಂದು, ಕಾಂಗ್ರೆಸ್​​ಗೊಂದು, ಜೆಡಿಎಸ್​ಗೆ ಶೂನ್ಯ!

masthmagaa.com:

ರಾಜ್ಯದಲ್ಲಿ 2 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​​ ಒಂದೊಂದು ಸೀಟು ಗೆದ್ದಿವೆ. ಜೆಡಿಎಸ್​ ಹೀನಾಯ ಸೋಲು ಅನಿಭವಿಸಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್​ ಭೂಸನೂರ್​​ 31,185 ಮತಗಳ ಅಂತರದಿಂದ ಕಾಂಗ್ರೆಸ್​​ ಅಭ್ಯರ್ಥಿಯನ್ನ ಸೋಲಿಸಿದ್ದಾರೆ. ಇಲ್ಲಿ 2018ರಲ್ಲಿ ಜೆಡಿಎಸ್​ ಗೆದ್ದಿತ್ತು. ಈಗ ಬಿಜೆಪಿ ಗೆದ್ದಿದೆ. ಇನ್ನು ಹಾವೇರಿ ಜಿಲ್ಲೆಯ ಹಾನಗಲ್​ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್​ ಮಾನೆ ಬಿಜೆಪಿ ಅಭ್ಯರ್ಥಿಯನ್ನ 7,373 ವೋಟುಗಳಿಂದ ಸೋಲಿಸಿದ್ದಾರೆ. ಇಲ್ಲಿ 2018ರಲ್ಲಿ ಬಿಜೆಪಿ ಗೆದ್ದಿತ್ತು. ಈಗ ಕಾಂಗ್ರೆಸ್ ಗೆದ್ದಿದೆ.

ಹಾವೇರಿ ಜಿಲ್ಲೆಯ ಹಾನಗಲ್​​ ಕ್ಷೇತ್ರ ಸಿಎಂ ಬೊಮ್ಮಾಯಿ ಅವರ ಪಾಲಿಗೆ ಪ್ರತಿಷ್ಠೆಯ ಕಣವಾಗಿತ್ತು. ಕಾರಣ ಹಾವೇರಿ ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆ. ಸಿಎಂ ಪ್ರತಿನಿಧಿಸುತ್ತಿರೋ ಶಿಗ್ಗಾವಿ ಕ್ಷೇತ್ರದ ಪಕ್ಕದಲ್ಲೇ ಇದೆ ಹಾನಗಲ್​ ಕ್ಷೇತ್ರ. ಹೀಗಾಗಿ ಅಲ್ಲಿ ಗೆಲ್ಲಲು ಸಿಎಂ ಬೊಮ್ಮಾಯಿ ಭರ್ಜರಿ ಕ್ಯಾಂಪೇನ್​ ನಡೆಸಿದ್ರು, ಹಲವು ಸಚಿವರನ್ನ ಅಲ್ಲಿ ನಿಯೋಜಿಸಲಾಗಿತ್ತು. ಆದ್ರೂ ಬಿಜೆಪಿ ಸೋತಿದೆ. ಬೊಮ್ಮಾಯಿ ಸಿಎಂ ಆದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್, ಜನ ಬದಲಾವಣೆ ಬಯಸ್ತಿದ್ದಾರೆ ಅಂತ ಹೇಳಿದೆ. ಜೆಡಿಎಸ್​ ಕಡೆಯಿಂದ ಮಾಜಿ ಪ್ರಧಾನಿ ದೇವೇಗೌಡ್ರು ಮಾತನಾಡಿ, ಈ ಫಲಿತಾಂಶದಿಂದ ನಾವು ಧೃತಿಗೆಟ್ಟಿಲ್ಲ. ಬರೀ ಬಿಜೆಪಿ, ಕಾಂಗ್ರೆಸ್​ ಆದ್ರೆ ನಾವೇನು ಮನೆಗೆ ಹೋಗಬೇಕಾ? ನಾನಿನ್ನೂ ಬದುಕಿದ್ದೇನೆ ಅಂತ ದೇವೇಗೌಡ್ರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply