ಪ್ರಶಾಂತ್ ಭೂಷಣ್​​​ಗೆ 1 ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್​​..!

masthmagaa.com:

ದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣ ಸಂಬಂಧ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್​​​ 1 ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ಸೆಪ್ಟೆಂಬರ್ 15ರ ಒಳಗೆ  ದಂಡವನ್ನು ಕಟ್ಟದೇ ಹೋದಲ್ಲಿ 3 ತಿಂಗಳ ಕಾಲ ಜೈಲು ಶಿಕ್ಷೆ ಎದುರಿಸಬೇಕಾಗುತ್ತೆ. ಅಥವಾ 3 ವರ್ಷಗಳ ಕಾಲ ವಕೀಲಿ ವೃತ್ತಿಯಿಂದ ದೂರ ಉಳಿಯಬೇಕಾಗುತ್ತೆ ಅಂತ ಸುಪ್ರೀಂಕೋರ್ಟ್​ ತೀರ್ಪು ಪ್ರಕಟಿಸಿದೆ.

ಕೊರೋನಾ ಲಾಕ್‌ಡೌನ್‌ ವೇಳೆ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ತಮ್ಮ ನೆಚ್ಚಿನ ಬೈಕ್‌ ಹಾರ್ಲೆ ಡೇವಿಡ್‌ಸನ್‌‌ನಲ್ಲಿ ಕುಳಿತು ಪೋಸ್‌ ನೀಡಿದ್ದರು. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದಂತೆ ಪ್ರತಿಕ್ರಿಯಿಸಿದ್ದ ಪ್ರಶಾಂತ್ ಭೂಷಣ್, ಬೈಕ್‌ ಮೇಲೆ ಕುಳಿತಿರುವ ಸಿಜೆ ಎಸ್‌.ಎ. ಬೋಬ್ಡೆ ತಲೆಗೆ ಹೆಲ್ಮೆಟ್‌ ಹಾಕಿಲ್ಲ. ಸುಪ್ರೀಂಕೋರ್ಟ್‌ಗೆ ಬೀಗ ಹಾಕಿ ಸಿಜೆಯವರು ಬೈಕ್‌ ಸವಾರಿ ಮಾಡ್ತಿದ್ದಾರೆ ಅಂತ ಟ್ವೀಟ್​​​ ಮೂಲಕ ಟೀಕಿಸಿದ್ರು. ಆದ್ರೆ ಈ ಮೂಲಕ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಅಂತ ಸುಪ್ರೀಂಕೋರ್ಟ್​​ ಹೇಳಿತ್ತು.

-masthmagaa.com

Contact Us for Advertisement

Leave a Reply