ರಾಜ್ಯದಲ್ಲಿರೋ ವಲಸಿಗರಿಗೆ ಶಾಕ್..! ಹೊರಗಟ್ಟುತ್ತಾ ಸರ್ಕಾರ..?

ಕರ್ನಾಟಕದಲ್ಲೂ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಹೊರಗೆ ಕಳುಹಿಸಲು ಸರ್ಕಾರ ಪ್ಲಾನ್ ಮಾಡ್ತಿದೆ. ಈಗಾಗಲೇ ರಾಷ್ಟ್ರೀಯ ಪೌರತ್ವ ನೋಂದಣಿ ಅಂದ್ರೆ ಎನ್‍ಆರ್‍ಸಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಪ್ಲಾನ್ ಮಡ್ತಿದೆ. ಎನ್‍ಆರ್‍ಸಿ ಲಿಸ್ಟ್‍ಗೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ನಂತರ ಒಂದೆರಡು ವಾರದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಅಲ್ಲದೆ ಬೆಂಗಳೂರು ಮತ್ತು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು ಮತ್ತ ಕೊಡಗಿನ ಕೆಲ ಭಾಗಗಳಲ್ಲಿ ಅಕ್ರಮವಾಗಿ ವಲಸಿಗರು ನೆಲೆಸಿದ್ದಾರೆ. ಇಲ್ಲಿನ ಕಾಫಿ ಎಸ್ಟೇಟ್‍ಗಳಲ್ಲಿ ಕೆಲಸ ಮಾಡಲು ವಿದೇಶಿಗರು ಬರ್ತಿದ್ದಾರೆ ಅಂತ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಈಗಾಗಲೇ ಹಲವು ಬಾರಿ ಸಭೆ ನಡೆಸಿರುವ ಬಸವರಾಜ್ ಬೊಮ್ಮಾಯಿ, ಅಕ್ರಮವಾಗಿ ನೆಲೆಸಿರುವ ವಲಸಿಗರ ಕುರಿತು ಮಾಹಿತಿ ಕಲೆಹಾಕುವಂತೆ ಸೂಚಿಸಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೂಡ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕಕ್ಕೂ ಎನ್‍ಆರ್‍ಸಿಯನ್ನ ವಿಸ್ತರಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ಕುಮಾರಸ್ವಾಮಿ ಕೂಡ ರಾಜ್ಯದಲ್ಲಿ 40 ಸಾವಿರ ಮಂದಿ ಬಾಂಗ್ಲಾದೇಶದವರು ಇದ್ದಾರೆ ಎಂದು ತಿಳಿಸಿದ್ದರು.

Contact Us for Advertisement

Leave a Reply