2ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ.. ಹೊಸ ರೂಲ್ಸ್​ ಇಲ್ಲಿದೆ ನೋಡಿ

masthmagaa.com:

ಕೊರೋನಾ ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿರೋ ಹೊಸ ನಿಯಮಗಳು ಈ ಕೆಳಗಿನಂತಿವೆ..

– ರಾಜ್ಯಾದ್ಯಂತ 6-9ನೇ ತರಗತಿವರೆಗಿನ ಶಾಲೆಗಳು ಬಂದ್. ಇದರಲ್ಲಿ ವಿದ್ಯಾಗಮ ಕೂಡ ಸೇರಿದೆ. 10, 11 ಮತ್ತು 12ನೇ ತರಗತಿಗಳು ಎಂದಿನಂತೆ ನಡೆಯಲಿವೆ. ಆದ್ರೆ ಈ ತರಗತಿಗಳ ಮಕ್ಕಳಿಗೆ ಹಾಜರಾತಿ ಕಡ್ಡಾಯವಲ್ಲ.

– ಬೋರ್ಡ್ ಅಥವಾ ಯುನಿವರ್ಸಿಟಿ ಪರೀಕ್ಷೆ ಇರೋರು ಮತ್ತು ಆರೋಗ್ಯ ವಿಜ್ಞಾನ ಕೋರ್ಸ್​ಗಳನ್ನ ಹೊರತುಪಡಿಸಿ ಉಳಿದೆಲ್ಲಾ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್​​ಗಳು ಬಂದ್.

– 10, 11 ಮತ್ತು 12ನೇ ತರಗತಿ ಮತ್ತು ಬೋರ್ಡ್​ ಎಕ್ಸಾಂ ಇರೋ ಮಕ್ಕಳನ್ನ ಹೊರತುಪಡಿಸಿ ಉಳಿದ ವಸತಿ ಶಾಲೆ ಮತ್ತು ಹಾಸ್ಟೆಲ್​ಗಳು ಬಂದ್.

– ಧಾರ್ಮಿಕ ಕ್ಷೇತ್ರಗಳಲ್ಲಿ ಗುಂಪು ಸೇರೋದು, ಕಾರ್ಯಕ್ರಮಗಳನ್ನ ನಡೆಸೋದು ನಿಷಿದ್ಧ.

– ರಾಜ್ಯಾದ್ಯಾಂತ ಜಿಮ್, ಸ್ವಿಮ್ಮಿಂಗ್​ ಪೂಲ್​ಗಳು ಬಂದ್.

– ಅಪಾರ್ಟ್​ಮೆಂಟ್​ ಕಾಂಪ್ಲೆಕ್ಸ್​ಗಳಲ್ಲಿರುವ ಜಿಮ್, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಪಾರ್ಟಿ ಹಾಲ್, ಕ್ಲಬ್ ಹೌಸ್​ಗಳು ಕೂಡ ಬಂದ್.

– ಯಾವುದೇ ರೀತಿಯ ರ್ಯಾಲಿ, ಮುಷ್ಕರ, ಧರಣಿಗೆ ಅವಕಾಶವಿಲ್ಲ.

– ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ನಿಗದಿತ ಆಸನಗಳನ್ನ ಮೀರುವಂತಿಲ್ಲ.

– ಸಾಧ್ಯವಾದಷ್ಟು ವರ್ಕ್​ ಫ್ರಂ ಹೋಮ್ ಮಾಡಬೇಕು.

– 8 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್​ ಸೀಟ್​ ಭರ್ತಿಗೆ ಅವಕಾಶ. (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ)

– 8 ಜಿಲ್ಲೆಗಳಲ್ಲಿ ಬಾರ್, ಪಬ್, ಕ್ಲಬ್ ಮತ್ತು ರೆಸ್ಟೋರೆಂಟ್​ಗಳಲ್ಲಿ 50 ಪರ್ಸೆಂಟ್​ ಸೀಟ್​ ಭರ್ತಿಗೆ ಮಾತ್ರ ಅವಕಾಶ. (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡ)

– ಪಬ್​, ಬಾರ್​, ರೆಸ್ಟೋರೆಂಟ್​, ಕ್ಲಬ್​, ಶಾಪಿಂಗ್ ಮಾಲ್​, ಮಾರುಕಟ್ಟೆ, ಅಂಗಡಿಗಳಲ್ಲಿ ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಪಾಡೋದು, ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಷ್​ ವ್ಯವಸ್ಥೆ ಮಾಡಬೇಕು. ಇಲ್ಲದಿದ್ರೆ ಅಂತಹ ಪಬ್​, ಬಾರ್​, ರೆಸ್ಟೋರೆಂಟ್​, ಕ್ಲಬ್, ಶಾಪಿಂಗ್ ಮಾಲ್​, ಮಾರುಕಟ್ಟೆ, ಅಂಗಡಿ​ಗಳನ್ನ ಕೊರೋನಾ ಮುಗಿಯೋವರೆಗೆ ಬಂದ್ ಮಾಡಲಾಗುತ್ತೆ.

– ಈ ಎಲ್ಲಾ ನಿಯಮಗಳು ಸರಿಯಾಗಿ ಜಾರಿಯಾಗುವಂತೆ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತ ನೋಡಿಕೊಳ್ಳಬೇಕು.

– ಏಪ್ರಿಲ್ 20ರವರೆಗೆ ಈ ನಿಯಮಗಳು ಜಾರಿಯಲ್ಲಿರುತ್ತೆ.

 

-masthmagaa.com

Contact Us for Advertisement

Leave a Reply