ದೇಶದಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ಜೋರು!

masthmagaa.com:

ಇವತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮದಿನ.. ಹೀಗಾಗಿಯೇ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜನವರಿ 24ರ ಬದಲಾಗಿ 23ರಂದು ಅಂದ್ರೆ ಇವತ್ತು ಗಣರಾಜ್ಯೋತ್ಸವ ಶುರು ಮಾಡಲಾಗಿದೆ. ಇಂಡಿಯಾ ಗೇಟ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಜೆ 6 ಗಂಟೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಂ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಸದ್ಯ ಸುಭಾಷ್ ಚಂದ್ರ ಬೋಸ್ ಅವರ ಗ್ರಾನೈಟ್ ಪ್ರತಿಮೆ ರೆಡಿಯಾಗ್ತಿದ್ದು, ಅಲ್ಲಿಯವರೆಗೆ ಈ ಹಾಲೋಗ್ರಾಂ ಪ್ರತಿಮೆ ಇರಲಿದೆ. ಇದು 90 ಪರ್ಸೆಂಟ್​​​ನಷ್ಟು ಪಾರದರ್ಶಕವಾಗಿರೋ ಹಾಲೋಗ್ರಾಫಿಕ್ ಸ್ಕ್ರೀನ್ ಇದ್ದು, ಪ್ರೇಕ್ಷಕರಿಗೆ ಕಾಣದಂತೆ ವ್ಯವಸ್ಥೆ ಮಾಡಲಾಗಿದೆ. ಇದು 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ. ಇದೇ ಕಾರ್ಯಕ್ರಮದಲ್ಲಿ 2019, 20, 21 ಮತ್ತು 22ರ ಸಾಲಿನ ಸುಭಾಶ್ ಚಂದ್ರ ಬೋಸ್ ಆಪದಾ ಪ್ರಬಂಧನ್​ ಪ್ರಶಸ್ತಿಗಳನ್ನು ಕೂಡ ವಿತರಿಸಿದ್ದಾರೆ. ನೈಸರ್ಗಿಕ ವಿಕೋಪ ಸಂಭವಿಸಿದಾಗ ಸಲ್ಲಿಸಿದ ಸೇವೆಗೆ ಗೌರವಾರ್ಥವಾಗಿ ಈ ಪ್ರಶಸ್ತಿ ನೀಡಲಾಗುತ್ತೆ. ಈ ಪ್ರಶಸ್ತಿ ಸಂಸ್ಥೆಗೆ ನೀಡಿದ್ರೆ 51 ಲಕ್ಷ ರೂಪಾಯಿ ಜೊತೆಗೆ ಸರ್ಟಿಫಿಕೇಟ್, ಅದೇ ವ್ಯಕ್ತಿಗತವಾಗಿ ನೀಡಿದ್ರೆ 5 ಲಕ್ಷ ರೂಪಾಯಿ ಮತ್ತು ಸರ್ಟಿಫಿಕೇಟ್ ನೀಡಲಾಗುತ್ತೆ.

ಅಂದಹಾಗೆ ಸುಭಾಶ್ ಚಂದ್ರ ಬೋಸ್ 1987ರ ಜನವರಿ 23ರಂದು ಒಡಿಶಾದ ಕಟಕ್​ನಲ್ಲಿ ಜನಿಸಿದ್ರು. ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ್ರು. ಗಣರಾಜ್ಯೋತ್ಸವ ಸಾಮಾನ್ಯವಾಗಿ ಜನವರಿ 29ರ ಬೀಟಿಂಗ್ ದಿ ರೀಟ್ರೀಟ್ ಮೂಲಕ ಅಂತ್ಯಗೊಳ್ಳುತ್ತೆ. ಆದ್ರೆ ಈ ಸಲ ಜನವರಿ 30ರಂದು ಅಂದ್ರೆ ಗಾಂಧೀಜಿ ಹತ್ಯೆಯಾದ ದಿನ ಅಂತ್ಯಗೊಳಿಸಲಾಗುತ್ತೆ ಅಂತ ಮೂಲಗಳು ತಿಳಿಸಿವೆ.

ಇನ್ನು ಜನವರಿ 26ರ 73ನೇ ಗಣರಾಜ್ಯೋತ್ಸವ ಪರೇಡ್​​​ಗೆ ಸಿದ್ಧತೆ, ಅಭ್ಯಾಸ ಕೂಡ ಜೋರಾಗಿದೆ. ಇವತ್ತು ದೆಹಲಿಯ ವಿಜಯ ಚೌಕ್​​ನಲ್ಲಿ ವಿವಿಧ ಪಡೆಯ ಯೋಧರು ಫುಲ್​ ಡ್ರೆಸ್​​ ರಿಹರ್ಸಲ್ ಅಂದ್ರೆ ಫುಲ್ ಸಮವಸ್ತ್ರ ಧರಿಸಿಕೊಂಡು ಅಭ್ಯಾಸ ಮಾಡಿದ್ದಾರೆ. ಮತ್ತೊಂದ್ಕಡೆ ಹೆಲಿಕಾಪ್ಟರ್​​ಗಳು ಕೂಡ ಹಾರಾಟ ನಡೆಸಿ, ಅಭ್ಯಾಸ ಮಾಡಿವೆ.

-masthmagaa.com

Contact Us for Advertisement

Leave a Reply