ರಾಜ್ಯದಲ್ಲಿ 12 ಮಂದಿಗೆ ಒಮೈಕ್ರಾನ್! ದೇಶದಲ್ಲಿ ಎಷ್ಟಾಯ್ತು ಗೊತ್ತಾ?

masthmagaa.com:

ದೇಶದಲ್ಲಿ ಈವರೆಗೆ 236 ಜನರಿಗೆ ಕೊರೋನಾದ ಒಮೈಕ್ರಾನ್ ರೂಪಾಂತರಿ ಸೋಂಕು ತಗುಲಿದೆ. ಅವರ ಪೈಕಿ ಈವರೆಗೆ 90 ಮಂದಿ ಗುಣಮುಖರಾಗಿದ್ದಾರೆ ಅಂತ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇದಲ್ಲದೆ ಇವತ್ತು ಹೊಸದಾಗಿ ರಾಜ್ಯದಲ್ಲಿ 12 ಮಂದಿಯಲ್ಲಿ ಒಮೈಕ್ರಾನ್ ರೂಪಾಂತರಿ ಕೊರೋನಾ ಪತ್ತೆಯಾಗಿದೆ. ಇವುಗಳ ಪೈಕಿ ಬೆಂಗಳೂರಲ್ಲೇ 10 ಕೇಸ್​ಗಳು ಪತ್ತೆಯಾಗಿವೆ. ಇವರಲ್ಲಿ ಮೂವರು ಬೆಂಗಳೂರಿನವರಾಗಿದ್ದು, ಉಳಿದ ಐವರು ಯುನೈಟೆಡ್​ ಕಿಂಗ್​ಡಮ್​​ನಿಂದ, ನೈಜೀರಿಯಾ ಮತ್ತು ಡೆನ್ಮಾರ್ಕ್​ನಿಂದ ತಲಾ ಒಬ್ಬೊಬ್ಬರು ಬಂದವರಾಗಿದ್ದಾರೆ. ಇನ್ನು ಘಾನಾದಿಂದ ಮಂಗಳೂರಿಗೆ ಮತ್ತು ಸ್ವಿಜರ್‌ ​ಲ್ಯಾಂಡ್​​ನಿಂದ ಮೈಸೂರಿಗೆ ಬಂದ ತಲಾ ಒಬ್ಬೊಬ್ಬರಲ್ಲಿ ಒಮೈಕ್ರಾನ್ ಪತ್ತೆಯಾಗಿದೆ. ಈ 12 ಮಂದಿ ಸೋಂಕಿತರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿರೋದು ಆತಂಕಕ್ಕೆ ಕಾರಣವಾಗಿದೆ. ಯುನೈಟೆಡ್​​ ಕಿಂಗ್​ಡಮ್​ನಿಂದ ಬೆಂಗಳೂರಿಗೆ ಬಂದ ಸೋಂಕಿತರಲ್ಲಿ 11 ವರ್ಷದ ಬಾಲಕಿ ಸೇರಿದ್ದಾಳೆ. ಇನ್ನು ಸ್ವಿಜರ್​ಲ್ಯಾಂಡ್​ನಿಂದ ಮೈಸೂರಿಗೆ ಬಂದಿರೋ ಸೋಂಕಿತೆಗೆ 9 ವರ್ಷ.. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

ಇನ್ನು ತಮಿಳುನಾಡಿನಲ್ಲಿ 33 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಇವರ ಪೈಕಿ ಇಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಲಸಿಕೆ ಹಾಕಿಸಿಕೊಂಡವರೇ ಆಗಿದ್ದಾರೆ. ಅತ್ತ ಕೇರಳದಲ್ಲಿ ಹೊಸದಾಗಿ ಐವರಿಗೆ, ಒಡಿಶಾದಲ್ಲಿ ಇಬ್ಬರಿಗೆ, ಹರಿಯಾಣದಲ್ಲಿ ಒಬ್ಬರಿಗೆ ಈ ಒಮೈಕ್ರಾನ್ ಅಂಟಿದೆ.

-masthmagaa.com

Contact Us for Advertisement

Leave a Reply