ವಿರಾಟ್‌ಕೊಹ್ಲಿ ಸಿಎಂ KCR ತರ; ಸೋಲಿಸೋಕೆ ಆಗಲ್ಲ: KCR ಪುತ್ರಿ

masthmagaa.com:

BRS ನಾಯಕ ಹಾಗೂ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ರಾವ್‌ ಪುತ್ರಿ ಶಾಸಕಿ ಕೆ. ಕವಿತ ವಿರಾಟ್‌ ಕೊಹ್ಲಿಯನ್ನ ತಮ್ಮ ತಂದೆ KCRಗೆ ಹೋಲಿಸಿದ್ದಾರೆ. ʻವಿರಾಟ್‌ ಕೊಹ್ಲಿ ಸಿಎಂ KCR ಇದ್ದಂಗೆ, ಯಾರು ಸೋಲಿಸೋಕೆ ಆಗಲ್ಲ. ಅವ್ರು ಫೀಲ್ಡಿಗೆ ಇಳಿದ್ರೆ ಮ್ಯಾಜಿಕ್‌ ಮಾಡ್ತಾರೆʼ ಅಂದಿದ್ದಾರೆ. ನಿನ್ನೆ ವಿರಾಟ್‌ಕೊಹ್ಲಿ 50 ನೇ ಶತಕ ಸಿಡಿಸಿ ರೆಕಾರ್ಡ್ ಬ್ರೇಕ್‌ ಮಾಡಿದ ಸಂದರ್ಭದಲ್ಲಿ ‌Xನ ಪೋಸ್ಟ್‌ ಒಂದ್ರಲ್ಲಿ ಕವಿತಾ ಈ ಕಂಪೇರಿಸನ್‌ ಮಾಡಿದ್ದಾರೆ. ಈ ಬಗ್ಗೆ ತೆಲಂಗಾಣ ಕಾಂಗ್ರೆಸ್‌ ನಾಯಕರು ವ್ಯಾಪಕ ಟೀಕೆ ಮಾಡಿದ್ದಾರೆ. “ದೇಶಕ್ಕಾಗಿ ಆಡೋದಕ್ಕೂ, ಕಮಿಷನ್‌ಗಾಗಿ ಆಡೋದಕ್ಕೂ ವ್ಯತ್ಯಾಸ ಇದೆ. ವಿರಾಟ್‌ ಕೊಹ್ಲಿಗೆ ಕ್ರಿಕೆಟ್‌ನಲ್ಲಿ ಕಾಂಪಿಟೇಷನ್‌ ಇಲ್ಲ. ಅದೇ ರೀತಿ ಕಾಳೇಶ್ವರಮ್‌ ಹಗರಣದಲ್ಲಿ KCR ಮೀರಿಸೋರು ಇಲ್ಲ” ಅಂತ ಕಾಂಗ್ರೆಸ್‌ ಕಾಲೆಳೆದಿದೆ.

-masthmagaa.com

Contact Us for Advertisement

Leave a Reply