ಹಿಜಾಬ್‌ ವಿವಾದ: ಕಾಂಗ್ರೆಸ್‌ ಮೇಲೆ ಒಮರ್‌ ಅಬ್ದುಲ್ಲಾ ಮುನಿಸು!

masthmagaa.com:

ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಹಿಜಬ್‌ ಬ್ಯಾನ್‌ ಮಾಡಿರೊ ವಿಚಾರವಾಗಿ ಮುಸ್ಲಿಂ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹಾಗೂ ಜಮ್ಮು ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ ಸರ್ಕಾರದ ನಡೆಯನ್ನ ವಿರೋಧಿಸಿದ್ದಾರೆ. “ಮುಸ್ಲಿಮರನ್ನ ಗುರಿಯಾಗಿಸಿಕೊಂಡು ಕರ್ನಾಟಕ ಸರ್ಕಾರ ಆದೇಶ ನೀಡಿದೆ. ಯಾವುದನ್ನ ಧರಿಸಬೇಕು, ಯಾವುದನ್ನು ಧರಿಸಬಾರದು ಅಂತ ಸರ್ಕಾರ ತೀರ್ಮಾನ ಮಾಡ್ಬಾರ್ದು. ಈ ಹಿಂದೆ BJP ಸರ್ಕಾರ ಹೀಗೆ ಮಾಡಿದ್ದಾಗ ನಮಗೆ ಆಶ್ಚರ್ಯ ಆಗ್ಲಿಲ್ಲ. ಆದ್ರೆ ಕಾಂಗ್ರೆಸ್‌ ಸರ್ಕಾರದಲ್ಲಿ ಹೀಗಾಗಿರೋದು ಬೇಸರ ತಂದಿದೆ. ಆದೇಶವನ್ನು ಮರುಪರಿಶೀಲನೆ ಮಾಡುವಂತೆ ಕಾಂಗ್ರೆಸ್‌ ನಾಯಕರ ಬಳಿ ಮನವಿ ಮಾಡ್ತೇನೆ” ಅಂತ ಅಬ್ದುಲ್ಲಾ ಹೇಳಿದ್ದಾರೆ. ಇನ್ನು ನಿನ್ನೆ KEA ಆದೇಶದ ಕುರಿತು ಕ್ಲಾರಿಟಿ ಕೊಟ್ಟಿದ್ದ ಶಿಕ್ಷಣ ಸಚಿವ ಎಂಸಿ ಸುಧಾಕರ್‌ “ಬಾಯಿಯನ್ನ ಕವರ್‌ ಮಾಡದ ಹಿಜಾಬ್‌ ಧರಿಸಿದರೆ ತೊಂದರೆ ಇಲ್ಲ. ಆದ್ರೆ ಅಂತಹ ವಿಧ್ಯಾರ್ಥಿನಿಯರು ಪರೀಕ್ಷೆ ಶುರುವಾಗೋ ಒಂದು ಗಂಟೆ ಮೊದಲೆ ಪರೀಕ್ಷಾ ಕೇಂದ್ರ ತಲುಪಿ ತಪಾಸಣೆಗೆ ಒಳಗಾಗ್ಬೇಕು. ಇದೇನು ಹೊಸ ರೂಲ್ಸಲ್ಲ. ಮೊದಲಿಂದಲೇ ಇತ್ತು. ಈಗ ಇನ್ನಷ್ಟು ಬಿಗಿಯಾಗ್ತಿದೆ ಅಷ್ಟೆ. ಅಲ್ಲದೇ ಎಕ್ಸಾಂ ಸೆಂಟರ್‌ಗಳಲ್ಲಿ ಹೆಚ್ಚುವರಿ ಮೆಟಲ್‌ ಡಿಟೆಕ್ಟರ್‌ಗಳ ವ್ಯವಸ್ಥೆ ಮಾಡಲಾಗತ್ತೆ. ಪರೀಕ್ಷೆಯಲ್ಲಿ ಅಕ್ರಮಗಳು, ಲೋಪದೋಷಗಳು ಉಂಟಾಗ್ಬಾರ್ದು ಅನ್ನೋದಷ್ಟೆ ನಮ್ಮ ಉದ್ದೇಶ” ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply