ಬಂದಿದೆ ಹೊಸ ʻಕೊರೋನಾʼ: KHOSTA-2 ದಿಂದ ಶ್ವಾಸಕೋಶಕ್ಕೆ ಆಪತ್ತು!

masthmagaa.com:

ಕೊರೊನಾ, ಮಂಕಿಪಾಕ್ಸ್ ಅನ್ನೋ ರೋಗಗಳಿಗೆ ಈಗಾಗಲೇ ಜಗತ್ತು ಏದುಸಿರು ಬಿಡ್ತಾಯಿದೆ. ಈ ಮಧ್ಯೆ ಚೀನಾದಲ್ಲಿ ಹೊಸ ಲ್ಯಾಂಗ್ಯಾ ಅನ್ನೋ ವೈರಸ್‌ ಕೂಡ ಕಾಣಿಸಿಕೊಂಡಿತ್ತು. ಆಫ್ರಿಕಾದಲ್ಲಿ ಈಗ ಎಬೊಲಾ ಸದ್ದು ಮಾಡ್ತಿದೆ. ಇಷ್ಟೆಲ್ಲದರ ಮಧ್ಯೆ ಈಗ ಮಗದೊಂದು ವೈರಸ್‌ ಜಗತ್ತಿನ ನಿದ್ದೆಗೆಡಿಸಿದೆ. ಇದು ಕೂಡ ಕೊರೊನಾ ರೀತಿಯ ವೈರಸ್‌ ಅಂತ ಹೇಳಲಾಗ್ತಿದ್ದು ಇದನ್ನ ʻಕೋಸ್ಟಾ2ʼ ಅಂತ ಕರೆಯಲಾಗಿದೆ. ನಾವೆಲ್‌ ಕೊರನಾ ವೈರಸ್‌ನ ಅಂದ್ರೆ ಕೋವಿಡ್‌ 19 ರೀತಿಯ ಪರಿಣಾಮವನ್ನ ಉಂಟುಮಾಡೋ ಈ ವೈರಸ್‌ ರಷ್ಯಾದ ಬಾವಲಿಗಳಲ್ಲಿ ಕಾಣಿಸಿಕೊಂಡಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಬಿಡಿ..ಬಂದ್ರೆ ಬರಲಿ, ಕೊರೋನಾ ವ್ಯಾಕ್ಸಿನೇ ಹಾಕುಸ್ಕೋ ಬಿಡೋಣ ಅಂತನೂ ಅಂದು ಕೊಳ್ಳೋ ಹಾಗಿಲ್ಲ. ಯಾಕಂದ್ರೆ ಇದಕ್ಕೆ ಯಾವುದೇ ಲಸಿಕೆ ಕೂಡ ಇಲ್ಲ. ಈಗಿರೋ ಕೊರೊನಾ ವ್ಯಾಕ್ಸಿನ್‌ಗಳಿಗೂ ಇದು ಬಗ್ಗೋದಿಲ್ಲ. ಆ ಇಂಜೆಕ್ಷನ್‌ಗಳನ್ನ ಕೂಡ ಎದುರಿಸಿ ನಿಲ್ಲುವ ತಾಕತ್ತು ಈ ವೈರಸ್‌ಗೆ ಇದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಇಲ್ಲಿ ಇನ್ನೊಂದು ಇಂಟರಸ್ಟಿಂಗ್‌ ವಿಚಾರ ಅಂದ್ರೆ ಈ ವೈರಸ್‌ ಮೊದಲು ಕಾಣಿಸಿಕೊಂಡಿದ್ದು 2020ರಲ್ಲಿ ರಷ್ಯಾದ.. ಅಂದ್ರೆ ಎಲ್ರೂ ಲಾಕ್‌ಡೌನ್‌ ಮಾಡ್ಕೊಂಡು ಮನೆಯೊಳಗೆ ಇದ್ದ ಟೈಮ್‌ನಲ್ಲಿ. ಆದ್ರೆ ಆಗ ಇದು ಅಷ್ಟಾಗಿ ಸದ್ದು ಮಾಡ್ತಿರಲಿಲ್ಲ. ಆದ್ರೆ ಈಗ ಇದರ ಭೀತಿ ಮತ್ತೆ ಶುರುವಾಗಿದ್ದುಇದರ ಸಂಶೋಧನಾ ವರದಿಗಳು ಕೂಡ ಈಗ ಬೆಳಕಿಗೆ ಬಂದಿದೆ. ಇನ್ನು ಇದರಲ್ಲಿ ಕೋಸ್ಟಾ 1 ಅಂತ ಕೂಡ ಇತ್ತು. ಆದರೆ ಅದು ಇಷ್ಟು ಡೇಂಜರ್‌ ಇರಲಿಲ್ಲ. ಆದ್ರೆ ಈ ʻಖೋಸ್ಟಾ-2 ತುಂಬಾ ಡೇಂಜರ್‌ ಅಂತ ಹೇಳಲಾಗ್ತಿದೆ. ಈ ವೈರಸ್ ಮಾನವ ದೇಹಗಳಿಗೆ ಸೋಂಕು ತಗುಲಿಸುವಲ್ಲಿ ಸಮರ್ಥವಾಗಿದೆ. ಇದು ಮಾನವನ ಜೀವಕೋಶಗಳಿಗೆ ಸರಾಗವಾಗಿ ದಾಳಿ ಮಾಡಿ ಹಾನಿ ಮಾಡುತ್ತೆ ಅಂತ ಸಂಶೋದಕರು ತಿಳಿಸಿದ್ದಾರೆ. ಬಾವಲಿಗಳು, ಪ್ಯಾಂಗೊಲಿನ್‌ಗಳು, ರಕೂನ್ ನಾಯಿಗಳು ಮತ್ತು ಪಾಮ್ ಸಿವೆಟ್‌ಗಳಂತಹ ವನ್ಯಜೀವಿಗಳಲ್ಲಿ ಹರಡ್ತಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply