ಕಿರಾತಕ2 ರಿಲೀಸ್ ಗೆ ರೆಡಿ: ಜೂನ್ 30ರಂದು ರಾಜ್ಯಾದ್ಯಂತ ಬಿಡುಗಡೆ!

masthmagaa.com:

ಕಿರಾತಕ 2 ಸಿನಿಮಾದ ಮೋಷನ್‌ ಪೋಸ್ಟರ್‌ ಅನ್ನ ಆನಂದ್‌ ಆಡಿಯೋ ಯ್ಯುಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಿದೆ. ಈ ಹಿಂದೆ ರಾಕಿಂಗ್‌ ಸ್ಟಾರ್‌ ಯಶ್‌ ಕಿರಾತಕ ಮೂವಿ ಮಾಡಿದ್ರು. ಕಿರಾತಕ ಪಾರ್ಟ್‌ 2 ಕೂಡ ಅವರೇ ಮಾಡಬೇಕಿತ್ತು. ಆದರೆ ನಂತರ ರಿಲೀಸ್‌ ಆದ ಕೆಜಿಎಫ್‌ ಮೂವಿ, ಕಿರಾತಕ ಸಿನಿಮಾದಿಂದ ಯಶ್‌ ಹೊರಬರುವಂತೆ ಮಾಡಿತ್ತು. ಆಲ್‌ರೆಡಿ ಪ್ಯಾನ್‌ ಇಂಡಿಯಾ ಸ್ಟಾರ್‌ ಅಂತ ಗುರುತಿಸಿಕೊಂಡಿರುವ ಯಶ್‌ ಅವರ ಮುಂದಿನ ಯೋಚನೆ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾವನ್ನ ಜನರಿಗೆ ಕೊಡಬೇಕು ಅನ್ನೋದು, ಹಾಗಾಗಿ ಕಿರಾತಕ ಪಾರ್ಟ್‌ 2 ಸಿನಿಮಾದಿಂದ ಹೊರಬಂದಿದ್ರು. ಕಿರಾತಕ ಸಿನಿಮಾಗೆ ಪ್ರದೀಪ್‌ ರಾಜ್‌ ಅವರು ನಿರ್ದೇಶನ ಮಾಡಿದ್ರು, ಕಿರಾತಕ 2 ಗೂ ಕೂಡ ಅವರೇ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಆರ್‌.ಕೆ. ತೇಜಸ್‌ ಅವರು ಹೀರೋ ಆಗಿರುವ ಕಿರಾತಕ ಸಿನಿಮಾದ ಶೂಟಿಂಗ್‌ ಏಲ್ಲಾ ಕಂಪ್ಲೀಟ್‌ ಆಗಿದೆ. ಜೂನ್‌ 30ಕ್ಕೆ ಈ ಸಿನಿಮಾ ತೆರೆ ಮೇಲೆ ಬರಲಿದೆ.

-masthmagaa.com

Contact Us for Advertisement

Leave a Reply