ಮತ್ತೊಂದು ಪ್ರಶಸ್ತಿ ಮೇಲೆ ಪಿ.ವಿ ಸಿಂಧು ಕಣ್ಣು

ಚೀನಾ:ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಇಂದು ಆರಂಭವಾಗಲಿರುವ ಕೊರಿಯಾ ಓಪನ್ ಸೂಪರ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಚೈನಾ ಓಪನ್ ಸೀರೀಸ್ ಆರಂಭದಲ್ಲೇ ಹಿನ್ನೆಡೆ ಅನುಭವಿಸಿದ್ದ ಸಿಂಧು, ಈ ಬಾರಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದ್ದಾರೆ. 24 ವರ್ಷದ ಸಿಂಧು ಮೊದಲ ಸುತ್ತಿನಲ್ಲಿ ಅಮೆರಿಕದ ಬಿವೆನ್ ಜಾಂಗ್ ವಿರುದ್ಧ ಕಾದಾಡಲಿದ್ದಾರೆ. ಈ ಹಿಂದೆ ವಿಶ್ವಚಾಂಪಿಯನ್ ಶಿಪ್‍ನಲ್ಲಿ ಜಾಂಗ್ ಅವರನ್ನು ಸಿಂಧೂ ಲೀಗ್ ಹಂತದಲ್ಲಿ ಸುಲಭವಾಗಿ ಸೋಲಿಸಿದ್ದರು. ಇನ್ನು ಪುರುಷರ ವಿಭಾಗದಲ್ಲಿ ಸಾಯಿ ಪ್ರಣೀತ್ ಹಾಗೂ ಅರ್ಹತಾ ಸುತ್ತಿನಲ್ಲಿ ಪರುಪಳ್ಳಿ ಕಶ್ಯಪ್ ಪಾಲ್ಗೊಳ್ಳಲಿದ್ದಾರೆ.

Contact Us for Advertisement

Leave a Reply